ಕರ್ನಾಟಕ

karnataka

ETV Bharat / state

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್​ ಆಟ ನಡೆಯಲ್ಲ: ಸಿಪಿವೈ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾರಿಗೇ ಟಿಕೇಟ್ ಕೊಟ್ಟರೂ ಬಿಜೆಪಿ ಗೆಲುವು ನಿಶ್ಚಿತ. ಅಷ್ಟೇ ಅಲ್ಲದೇ ಡಿಕೆ ಬ್ರದರ್ಸ್​ಗೆ ಸೋಲು ಸೋಲು ಕಟ್ಟಿಟ್ಟ ಬುತ್ತಿ ಎಂದು ಸಿ ಪಿ ಯೋಗೇಶ್ವರ್ ತಿಳಿಸಿದರು.

ಸಿ ಪಿ ಯೋಗೇಶ್ವರ್

By

Published : Mar 15, 2019, 2:30 PM IST

ರಾಮನಗರ: ಸಂಸದರ ದಬ್ಬಾಳಿಕೆ, ದುರಹಂಕಾರ ಪ್ರವೃತ್ತಿಯೇ ಅವರಿಗೆ ಮುಳುವಾಗಲಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿಕೆ ಬ್ರದರ್ಸ್ ಆಟ ನಡೆಯೋದಿಲ್ಲ ಎಂದು ರಾಮನಗರದ ಖಾಸಗಿ ಹೋಟೆಲ್​ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಸಿ ಪಿ ಯೋಗೇಶ್ವರ್

ಡಿಕೆ ಬ್ರದರ್ಸ್ ಕಪ್ಪು ಸಾಮ್ರಾಜ್ಯ ಉಳಿಸಿಕೊಳ್ಳುವ ಸಲುವಾಗಿ ಅವರಿಗೆ ದೆಹಲಿಯಲ್ಲಿ ಪ್ರತಿನಿಧಿ ಬೇಕು. ಅದಕ್ಕಾಗಿ ಅಕ್ರಮ‌ ಕಪ್ಪುಹಣ ಬಳಕೆ ಮಾಡುತ್ತಾರೆ. ಅವರಿಗೆ ಈ ಚುನಾವಣೆಯಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದರು.

ಈ ಚುನಾವಣೆಯಲ್ಲಿ ಅಭ್ಯರ್ಥಿ ಯಾರೇ ಆದರೂ ಇಲ್ಲಿ ಮೋದಿಯವರ ವರ್ಚಸ್ಸು ದೇಶದ ಭದ್ರತೆ ಮುಖ್ಯ ಆಗುತ್ತೆ. ಇದು ಒಂದು ಕಡೆಯಾದ್ರೆ‌ ಅಕ್ರಮ‌ ಹಾಗೂ ಕಪ್ಪು ಹಣದ ಸಾಮ್ರಾಜ್ಯ ಮತ್ತೊಂದೆಡೆಗೆ ನಿಲ್ಲುತ್ತೆ. ಅಂತಿಮವಾಗಿ ಈ ಚುನಾವಣೆಯಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಬಿಜೆಪಿ ಗೆಲುವು ನಿಶ್ಚಿತ. ದೆಹಲಿ ಆಸೆ ನನಗಿಲ್ಲ, ಹೈಕಮಾಂಡ್ ಸೂಚಿಸಿದರೆ ಪಕ್ಷದ ಆದೇಶ ಪಾಲನೆ ಮಾಡುತ್ತೇನೆ ಎಂದರು.

ದೇಶದ ಪ್ರಧಾನ‌ಮಂತ್ರಿಗೆ ಸವಾಲೊಡ್ಡುವ ಮಟ್ಟಿಗೆ‌ ಬೆಳೆದಿರುವ ಡಿಕೆ ಬ್ರದರ್ಸ್ ಕಟ್ಟಿ ಹಾಕೋಕೆ ಮತದಾರರೇ ಸನ್ನದ್ಧರಾಗುತ್ತಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನ ಒಂದು ಗಂಟೆ ಕುಮಾರ ಸ್ವಾಮಿರವರು ಪ್ರಧಾನಿಗಳ‌ ಜೊತೆ‌ ಚರ್ಚೆ ನಡೆಸಿದ್ದಾರೆ. ಚುನಾವಣೆ ಬಳಿಕ‌ ಸರ್ಕಾರದ ದಿಕ್ಕು ಬದಲಾಗುತ್ತೆ. ಸರ್ಕಾರ ತೆಗೆಯೋಕೆ ಒಂದು ಗಂಟೆ ಸಾಕು. ಅದೇನು ಮಹಾ‌ ಅಲ್ಲ. ಹೆಚ್​ಡಿಕೆ‌ ಕೇಂದ್ರದ ಬಿಜೆಪಿ ಜೊತೆ ಚೆನ್ನಾಗಿದ್ದಾರೆ. ಮುಂದೆ ಏನು ಬೇಕಾದರೂ ಆಗಿತ್ತದೆ ಕಾದು ನೋಡಿ ಎಂದರು.

ABOUT THE AUTHOR

...view details