ಕರ್ನಾಟಕ

karnataka

ETV Bharat / state

ನಿಂತಿದ್ದ ಟಿಟಿ ವಾಹನಕ್ಕೆ ಟ್ಯಾಂಕರ್​ ಡಿಕ್ಕಿ: ಮೂವರ ಸಾವು - ramanagar accident news

ಟೀ‌ ಕುಡಿಯಲೆಂದು ರಸ್ತೆ‌ ಬದಿಯಲ್ಲಿ‌‌ ನಿಲ್ಲಿಸಿದ್ದ ಟಿಟಿ ವಾಹನಕ್ಕೆ ಟ್ಯಾಂಕರ್​ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವಿಗೀಡಾಗಿದ್ದಾರೆ. ಈ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಯಾರಬ್ ನಗರದ ಬಳಿ ನಡೆದಿದೆ.

tanker-collides-to-a-tt-vehicle-three-died
ನಿಂತಿದ್ದ ಟಿಟಿ ವಾಹನಕ್ಕೆ ಟ್ಯಾಂಕರ್​ ಡಿಕ್ಕಿ

By

Published : Mar 21, 2021, 8:46 PM IST

Updated : Mar 21, 2021, 9:30 PM IST

ರಾಮನಗರ: ನಿಂತಿದ್ದ ಟಿಟಿ ವಾಹನಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ‌ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಯಾರಬ್ ನಗರದ ಬಳಿ ನಡೆದಿದೆ.

ವಿಜಯ್, ಪ್ರದೀಪ್ ಹಾಗೂ ಮದನ್ ಮೃತರು. ಮೃತರೆಲ್ಲರೂ ಬೆಂಗಳೂರಿನವರಾಗಿದ್ದಾರೆ. ಮೈಸೂರಿನಲ್ಲಿ ನಾಳೆ ಸ್ನೇಹಿತನ ಮದುವೆ ಇದ್ದ ಕಾರಣ ಟಿಟಿ‌ ಮಾಡಿಕೊಂಡು ಹೊರಟಿದ್ದರು.

ಚನ್ನಪಟ್ಟಣದ ಸಮೀಪ ಟೀ‌ ಕುಡಿಯಲೆಂದು ರಸ್ತೆ‌ ಬದಿಯಲ್ಲಿ ‌‌ಟಿಟಿ ನಿಲ್ಲಿಸಿದ್ದರು. ಬೆಂಗಳೂರಿನಿಂದ ಬರುತ್ತಿದ್ದ ಟ್ಯಾಂಕರ್ ಚಾಲಕನ ನಿಯಂತಣ ತಪ್ಪಿ ನಿಂತದ್ದ ಟಿಟಿಗೆ ಡಿಕ್ಕಿ ಹೊಡೆದಿದೆ.

ಓದಿ:ರಾಜ್ಯದಲ್ಲಿಂದು 1,715 ಮಂದಿಗೆ ತಗುಲಿದ ಕೊರೊನಾ: ಇಬ್ಬರು ಬಲಿ

ರಸ್ತೆಯ ಬದಿಯಲ್ಲಿ ಟೀ ಕುಡಿಯುತ್ತಿದ್ದವರ ಮೇಲೆ ಟ್ಯಾಂಕರ್ ಹರಿದಿದೆ. ಟ್ಯಾಂಕರ್ ಗುದ್ದಿದ ರಭಸಕ್ಕೆ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಉಳಿದ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚನ್ನಪಟ್ಟಣ ಸಂಚಾರಿ ಪೊಲೀಸ್​​ ಠಾಣೆಯಲ್ಲಿ ‌ದೂರು ದಾಖಲಾಗಿದೆ.

Last Updated : Mar 21, 2021, 9:30 PM IST

ABOUT THE AUTHOR

...view details