ರಾಮನಗರ:ಬಾಣಂತಿ ಡಿಸ್ಚಾರ್ಜ್ ಮಾಡಲು 6 ಸಾವಿರ ರೂ. ಲಂಚ ಕೇಳಿದ್ದ ಮಹಿಳಾ ವೈದ್ಯರನ್ನು ರಾಮನಗರ ಡಿಎಚ್ಒ ಡಾ. ಕಾಂತರಾಜು ಅಮಾನತು ಮಾಡಿ ಆದೇಶಿಸಿದ್ದಾರೆ. ಬಿಡದಿ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞೆ ಶಶಿಕಲಾ, ಡಾ.ಐಶ್ವರ್ಯ ಅಮಾನತುಗೊಂಡವರು.
ಬಾಣಂತಿ ರೂಪ ಅವರ ಬಳಿ ಡಿಸ್ಚಾರ್ಜ್ ಮಾಡಲು ವೈದ್ಯೆ ಶಶಿಕಲಾ ಅವರು 6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವಿಡಿಯೋ ವೈರಲ್ ಆಗಿತ್ತು. ತಕ್ಷಣ ಎಚ್ಚೆತ್ತ ರಾಮನಗರ ಡಿಎಚ್ಒ ಡಾ. ಕಾಂತರಾಜು ಅವರು, ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಶಿಕಲಾ, ಡಾ. ಐಶ್ವರ್ಯ ಅವರನ್ನ ಅಮಾನತು ಮಾಡಿದ್ದಾರೆ.