ರಾಮನಗರ:ಅತೀ ವೇಗವಾಗಿ ಬಂದ ಖಾಸಗಿ ಬಸ್ಸೊಂದು ರಸ್ತೆ ಮೇಲೆ ನಿಂತಿದ್ದ ಆರು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮಗುವೊಂದು ಮೃತ ಪಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ನೂತನ ಬಿಎಂ ರಸ್ತೆಯ ಎಂಟಿಆರ್ ಹೋಟೆಲ್ ಬಳಿ ನಡೆದಿದೆ.
ರಾಮನಗರ: ನಿಂತಿದ್ದ ವಾಹನಗಳಿಗೆ ಬಸ್ ಡಿಕ್ಕಿ ಮಗು ಸಾವು - Etv Bharat Kannada
ಖಾಸಗಿ ಬಸ್ಸೊಂದು ಆರು ವಾಹನಗಳಿಗೆ ಡಿಕ್ಕಿಹೊಡೆದಿದ್ದು ಘಟನೆಯಲ್ಲಿ ಮಗುವೊಂದು ಮೃತ ಪಟ್ಟಿದೆ.
ರಾಮನಗರದಲ್ಲಿ ರಸ್ತೆ ಅಪಘಾತ
ಅತೀ ವೇಗದಲ್ಲಿ ಚಾಲಕ ಬಸ್ ಚಲಾಯಿಸಿದ ಹಿನ್ನೆಲೆ ಬಸ್ ನಿಯಂತ್ರಣಕ್ಕೆ ಬಾರದೇ ಆರು ವಾಹನಗಳಿಗೆ ಡಿಕ್ಕಿಹೊಡೆದಿದೆ. ಪರಿಣಾಮ ಮಗುವೊಂದು ಸ್ಥಳದಲ್ಲೇ ಮೃತಪಟ್ಟಿದ್ದು, ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಳುಗಳನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಭಟ್ಕಳದಲ್ಲಿ ಟೆಂಪೋ-ಐರಾವತ ಬಸ್ ನಡುವೆ ಅಪಘಾತ.. 20ಕ್ಕೂ ಹೆಚ್ಚು ಮಂದಿಗೆ ಗಾಯ
Last Updated : Oct 1, 2022, 10:05 PM IST