ಕರ್ನಾಟಕ

karnataka

By ETV Bharat Karnataka Team

Published : Oct 19, 2023, 1:11 PM IST

Updated : Oct 19, 2023, 2:52 PM IST

ETV Bharat / state

ರಾಮನಗರ: ಮಹಿಳೆ ಅನುಮಾನಾಸ್ಪದ ಸಾವು, ಪ್ರಿಯಕರನ ಬಂಧನ

ಮಹಿಳೆಯ ಮಗ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಿಯಕರನನ್ನು ಬಂಧಿಸಿದ್ದಾರೆ.

Ramanagara: Suspicious death of woman, lover arrested
ರಾಮನಗರ: ಮಹಿಳೆ ಅನುಮಾನ್ಪದ ಸಾವು, ಪ್ರಿಯಕರನ ಬಂಧನ

ರಾಮನಗರ:ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕನಕಪುರದ ನಿರ್ವಾಣೇಶ್ವರ ನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಪ್ರಿಯಕರನನ್ನು ಬಂಧಿಸಲಾಗಿದೆ. ಕಮಲಾಬಾಯಿ (38) ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಮಲಾಬಾಯಿ ಆತ್ಮಹತ್ಯೆ ಮಾಡಿಕೊಂಡಿದ್ದು, ಒಂದು ದಿನದ ತಡವಾಗಿ ಮನೆಯವರಿಗೆ ಗೊತ್ತಾಗಿದೆ ಅಷ್ಟೋತ್ತಿಗಾಗಲೇ ಮಹಿಳೆ ಮೃತಪಟ್ಟಿದ್ದರು ಎನ್ನಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಪ್ರಿಯಕರ ಲಿಂಗರಾಜು ನಾಯಕ (47) ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪತಿಯಿಂದ ದೂರವಾಗಿದ್ದ ಕಮಲಾಬಾಯಿ ಲಿಂಗರಾಜು ನಾಯಕ್ ಜೊತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಶಂಕೆ ಇತ್ತು, ಅಲ್ಲದೇ ಈ ಹಿಂದೆ ಇಬ್ಬರು ಜೊತೆಯಲ್ಲಿ ವಾಸಿಸುತ್ತಿದ್ದು, ಇಬ್ಬರ ನಡುವೆ ಗಲಾಟೆ ಆಗಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಮೃತ ಮಹಿಳೆಯ ಮಗ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಲಿಂಗರಾಜು ಎಂಬುವರನ್ನು ಬಂಧಿಸಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಲಿಂಗರಾಜುನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ :ದಾವಣಗೆರೆ: ಗರಡಿ ಮನೆಯಲ್ಲೇ ಅಪ್ರಾಪ್ತ ಕುಸ್ತಿಪಟು ಆತ್ಮಹತ್ಯೆ.. ಕಾರಣ ನಿಗೂಢ

ಸಾಲಬಾಧೆಗೆ ಸೋತು ಉದ್ಯಮಿ ಆತ್ಮಹತ್ಯೆ : ಸಾಲಬಾಧೆಯಿಂದ ಬೇಸತ್ತು ಉದ್ಯಮಿಯೊಬ್ಬರು ತಮ್ಮ ಕಾರ್ಖಾನೆಯಲ್ಲಿಯೆ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಇತ್ತೀಚೆಗೆ ಗೋಕುಲ್​ ರಸ್ತೆಯ ಇಂಡಸ್ಟ್ರಿಯಲ್​ ಎಸ್ಟೇಟ್​ನಲ್ಲಿ ನಡೆದಿತ್ತು. ಶ್ರೀನಿಧಿ ಸ್ಟೀಲ್​ ವರ್ಕ್​ನ ಮಾಲೀಕ ಉದ್ಯಮಿ ರವಿ ಮುರಗೋಡ್​ ಎನ್ನುವವರು ಆತ್ಮಹತ್ಯೆ ಮಾಡಿಕೊಂಡವರು. ಖಾಸಗಿ ಬ್ಯಾಂಕ್​ ಹಾಗೂ ಇನ್ನೂ ಕೆಲವು ಕಡೆಗಳಲ್ಲಿ ಸಾಲ ಮಾಡಿದ್ದ ಇವರು, ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಪರಿಶೀಲನೆ ನಡೆಸಿದ್ದರು. ಗೋಕುಲ್​ ರೋಡ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಒಂದೇ ಕುಟುಂಬದ ಮೂವರು ಸಜೀವ ದಹನ( ಶಿವಮೊಗ್ಗ): ಒಂದೇ ಕುಟುಂಬದ ಮೂವರು ಸಜೀವ ದಹನವಾಗಿದ್ದು, ಓರ್ವ ತೀವ್ರವಾಗಿ ಗಾಯಗೊಂಡಿದ್ದ ಘಟನೆ ಇತ್ತೀಚೆಗೆ ತೀರ್ಥಹಳ್ಳಿಯ ಅರಳಸುರಳಿ ಗ್ರಾಮದ ಬಳಿ ನಡೆದಿತ್ತು. ಅರ್ಚಕ ವೃತ್ತಿ ಮಾಡುತ್ತಿದ್ದ ರಾಘವೇಂದ್ರ ಎನ್ನುವವರು ಕುಟುಂಬ ಸಮೇತ ತಮ್ಮ ಮನೆಯ ಹಾಲ್​ನಲ್ಲಿಯೇ ಕಟ್ಟಿಗೆ ಜೋಡಿಸಿಟ್ಟು ಬೆಂಕಿ ಹಚ್ಚಿಕೊಂಡಿರುವ ಕುರುಹು ಪತ್ತೆಯಾಗಿದ್ದು, ಹಾಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಗ್ರಮಸ್ಥರು ಮನೆಯಲ್ಲಿದ್ದವರನ್ನು ರಕ್ಷಿಸಲು ಯತ್ನಿಸಿದ್ದರು. ಆಗ ಮೂವರು ಮನೆಯಲ್ಲಿಯೇ ಸಜೀವ ದಹನವಾಗಿದ್ದು, ಒಬ್ಬ ತೀವ್ರವಾಗಿ ಗಾಯಗೊಂಡಿದ್ದನು. ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ತೀರ್ಥಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Last Updated : Oct 19, 2023, 2:52 PM IST

ABOUT THE AUTHOR

...view details