ರಾಮನಗರ:ಮಾಗಡಿ ತಾಲೂಕಿನ ಕಂಚುಗಲ್ಲು ಬಂಡೇಮಠದ ಬಸವಲಿಂಗ ಸ್ವಾಮೀಜಿ(45) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುದೂರು ಬಳಿಯ ಕಂಚುಗಲ್ಲು ಬಂಡೇಮಠದಲ್ಲಿರುವ ಬೆಟ್ಟದ ಮಹಾಲಿಂಗೇಶ್ವರ ಪೂಜಾ ನಿಲಯದ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿಯವರ ಮೃತದೇಹ ಪತ್ತೆಯಾಗಿದೆ.
ಬಸವಲಿಂಗ ಸ್ವಾಮೀಜಿಯವರು ಬಂಡೇಮಠದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದರು. ಚಿಲುಮೆ ಮಠದ ಬಸವಲಿಂಗ ಸ್ವಾಮೀಜಿಯವರೂ ಸಹ ಇದೇ ರೀತಿ ನೇಣುಬಿಗಿದ ಸ್ಥಿತಿಯಲ್ಲಿ ಮೃತರಾಗಿದ್ದರು. ಈ ಘಟನೆಗೆ ಒಂದು ವರ್ಷವೂ ಆಗಿಲ್ಲ. ಅದು ಮಾಸುವ ಮುನ್ನವೇ ಮತ್ತೊಂದು ಪ್ರಕರಣ ನಡೆದಿದೆ.