ಕರ್ನಾಟಕ

karnataka

ETV Bharat / state

ಗಣೇಶ ನಿಮಜ್ಜನ ವೇಳೆ ಗಲಾಟೆ: ವ್ಯಕ್ತಿ ಕೊಲೆ - ramanagara crime news

ಗಣೇಶ ನಿಮಜ್ಜನ ವೇಳೆ ಎರಡು ಗುಂಪುಗಳ ನಡುವೆ ಜಗಳವಾಗಿದ್ದು, ವ್ಯಕ್ತಿಯೊಬ್ಬ ಕೊಲೆಯಾಗಿದ್ದಾನೆ.

murder at ramanagara
ರಾಮನಗರ ಕೊಲೆ ಪ್ರಕರಣ

By

Published : Sep 14, 2021, 2:26 PM IST

ರಾಮನಗರ: ಗಣೇಶ ನಿಮಜ್ಜನ ವೇಳೆ ಗಲಾಟೆಯಾಗಿ ಮಾರಕಾಸ್ತ್ರದಿಂದ ವ್ಯಕ್ತಿಯೊಬ್ಬನಿಗೆ ಚುಚ್ಚಿ, ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸಾದಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಂಜೇಗೌಡ (45) ವರ್ಷ ಕೊಲೆಯಾದ ವ್ಯಕ್ತಿ. ಒಂದೇ ಊರಿನವರಿಂದಲೇ ನಂಜೇಗೌಡ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಗಣೇಶ ನಿಮಜ್ಜನ ವೇಳೆ ಎರಡು ಗುಂಪುಗಳ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತೆರಳಿ ಮಾರಕಾಸ್ತ್ರದಿಂದ ಚುಚ್ಚಿ, ತಲೆಗೆ ಬಲವಾದ ಆಯುಧದಿಂದ ಹೊಡೆದ ಪರಿಣಾಮ ಸ್ಥಳದಲ್ಲೇ ನಂಜೇಗೌಡ ಮೃತ ಪಟ್ಟಿದ್ದಾನೆ.

ಇದನ್ನೂ ಓದಿ:ಹುಬ್ಬಳ್ಳಿ - ಧಾರವಾಡ: ಮನೆಯಲ್ಲಿದ್ದ ಚಿನ್ನಾಭರಣ, ಹಣ ದೋಚಿ ಪರಾರಿಯಾದ ಕಳ್ಳರು

ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತನ ಶವವನ್ನು ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಿದ್ದಾರೆ.

ABOUT THE AUTHOR

...view details