ರಾಮನಗರ: ಈಗಲ್ಟನನ್ ರೆಸಾರ್ಟ್ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಗಣೇಶ್ ಅವರ ವಿಚಾರಣೆ ನಡೆಸಲಾಯಿತು.
ಸತತ ಎರಡು ಗಂಟೆ ಕಾಲ ಕಂಪ್ಲಿ ಗಣೇಶ್ ವಿಚಾರಣೆ - news kannada
ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಕಂಪ್ಲಿ ಶಾಸಕ ಗಣೇಶ್ ಅವರ ವಿಚಾರಣೆಯನ್ನು ಪೊಲೀಸರು ಬಹುತೇಕ ಪೂರ್ಣಗೊಳಿಸಿದ್ದಾರೆ.
ಕಂಪ್ಲಿ ಶಾಸಕ ಗಣೇಶ್ ವಿಚಾರಣೆ ನಡೆಸಿದ ಪೊಲೀಸರು.
ಸತತ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ ರಾಮನಗರ ಸಿಪಿಐ ಜೀವನ್ ಹಾಗೂ ಪಿಎಸ್ಐ ಹರೀಶ್ ಅವರು ಕೇಸ್ಗೆ ಸಂಬಂಧಪಟ್ಟ ಬಹುತೇಕ ವಿಚಾರಣೆ ಪೂರ್ಣಗೊಳಿಸಿದರು.
ಬಂದೋಬಸ್ತ್ ಮೂಲಕ ಗಣೇಶ್ ಅವರನ್ನುಬಿಡದಿ ಠಾಣೆಯಿಂದ ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಲಾಗಿದೆ. ಇದಕ್ಕೂ ಮುನ್ನ ಅವರ ಹೇಳಿಕೆ ಪಡೆದಿದ್ದು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಅವಶ್ಯತೆ ಬಂದಿಲ್ಲ. ಹಾಗಾಗಿ ಕೋರ್ಟ್ಗೆ ಹಾಜರುಪಡಿಸಲಿದ್ದೇವೆ ಎಂದು ಎಸ್ಪಿ ರಮೇಶ್ ಬಾನೋತ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.