ಕರ್ನಾಟಕ

karnataka

ETV Bharat / state

ಡಿ ಕೆ ಶಿವಕುಮಾರ್ ಮತ್ತೆ ಜೈಲಿಗೆ ಹೋಗ್ತಾರೆ: ಸಚಿವ ಡಾ ಅಶ್ವತ್ಥ್​ ನಾರಾಯಣ್ - ದಲಿತರಿಗೆ ಮೀಸಲಿಟ್ಟ ಹಣ ದುರುಪಯೋಗ

ಕಾಂಗ್ರೆಸ್​ನವರು ದಿವಾಳಿಯಾಗಿದ್ದಾರೆ. ಅವರಿಗೆ ಏನು ಹೇಳೋಕೆ ಇಲ್ಲ. ಬಾಯಿಗೆ ಬಂದ ಹಾಗೆ, ತಲೆಗೆ ಬಂದ ಹಾಗೆ ಮಾತಾಡೋದನ್ನು ಕಾಂಗ್ರೆಸ್​ನವರು ಬಿಡಬೇಕು ಎಂದು ಸಚಿವ ಡಾ ಅಶ್ವತ್ಥ್​ ನಾರಾಯಣ್ ಹೇಳಿದ್ದಾರೆ.

ಸಚಿವ ಡಾ ಅಶ್ವತ್ಥ್​ ನಾರಾಯಣ್
ಸಚಿವ ಡಾ ಅಶ್ವತ್ಥ್​ ನಾರಾಯಣ್

By

Published : Nov 20, 2022, 8:17 PM IST

ರಾಮನಗರ: ಈಗಾಗಲೇ ಎಲ್ಲದಕ್ಕೂ ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದೇನೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕಾಂಗ್ರೆಸ್​ನವರು ತನಿಖೆ‌ ಮಾಡ್ತಿಲ್ಲ. ಪ್ರತಿದಿನ ಇವರೇ ಇನ್ವೆಷ್ಟಿಗೇಷನ್​ ಮಾಡೋ ರೀತಿ ಬಿಲ್ಡಪ್ ಕೊಡ್ತಾ ಇದ್ದಾರಲ್ಲ. ಎಲ್ಲಿಂದ ಇವರಿಗೆ ಮಾಹಿತಿ ಸಿಕ್ಕಿದೆ ಎಂದು ಸಚಿವ ಡಾ ಅಶ್ವತ್ಥ್​ ನಾರಾಯಣ್ ಕಿಡಿಕಾರಿದ್ದಾರೆ.

ಖಾಸಗಿ ಏಜನ್ಸಿ ಮುಖಾಂತರ ಮತದಾರರ ಮಾಹಿತಿ ಕಲೆಹಾಕಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಹಳ ಸ್ಪಷ್ಟವಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಈಗಾಗಲೇ ನಮ್ಮ‌ ಪಕ್ಷದ ಎಲ್ಲರೂ ಉತ್ತರ ಕೊಟ್ಟಿದ್ದಾರೆ. ಕಾಂಗ್ರೆಸ್​ನವರು ದಿವಾಳಿಯಾಗಿದ್ದಾರೆ. ಅವರಿಗೆ ಏನು ಹೇಳೋಕೆ ಇಲ್ಲ. ಬಾಯಿಗೆ ಬಂದ ಹಾಗೆ, ತಲೆಯಲ್ಲಿ ತಿಳಿದ ಹಾಗೆ ಮಾತಾಡೋದನ್ನು ಕಾಂಗ್ರೆಸ್​ನವರು ಬಿಡಬೇಕು ಎಂದರು.

ಕಾಂಗ್ರೆಸ್ ನವರ ಕಾಲದಲ್ಲಿ ಏನೆಲ್ಲಾ ಕರ್ಮಕಾಂಡಗಳನ್ನು ಮಾಡಿಕೊಂಡು ಕೂತಿದ್ದಾರೆ. ಇದು ಎಲ್ಲರಿಗೂ ಗೊತ್ತಿದೆ ಅಲ್ವ?. ತನಿಖೆಯಲ್ಲಿ ಯಾವುದೇ ರೀತಿಯ ಹಸ್ತಕ್ಷೇಪವನ್ನು ಯಾರೂ ಮಾಡೋದಿಲ್ಲ. ಪೊಲೀಸರು ಮುಕ್ತವಾಗಿ ತನಿಖೆ ಮಾಡ್ತಿದ್ದಾರೆ. ಇವೆಲ್ಲವೂ ಕಾಂಗ್ರೆಸ್​ನವರದ್ದೇ ಕೈವಾಡ ಇರುತ್ತದೆ. ನನಗೆ ಎಲ್ಲವೂ ಗೊತ್ತಿದೆ. ಯಾವುದೇ ರೀತಿಯ ನೆರವು, ಸಹಕಾರ ಕೊಡದೇ ಮುಕ್ತವಾಗಿ ತನಿಖೆ ಮಾಡಲಾಗುತ್ತದೆ ಎಂದು ಹೇಳಿದರು.

ಡಿಕೆಶಿ ಜೈಲಿಗೆ ಹೋಗ್ತಾರೆ..ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕಾನೂನು ಉಲ್ಲಂಘನೆ ಮಾಡಿದ್ರೆ ಏನೆಲ್ಲಾ ಕ್ರಮ ಆಗುತ್ತೋ ಗೊತ್ತಿಲ್ಲ. ಆದ್ರೆ ಜೈಲಿಗೆ ಹೋಗಿ ಬಂದಿರೋದಕ್ಕೆಲ್ಲ ನಾವು ಹೊಣೆಯಾಗೋಕಾಗುತ್ತಾ.? ಮುಂದೆ ಕೂಡ ಡಿ ಕೆ ಶಿವಕುಮಾರ್ ಜೈಲಿಗೆ ಹೋಗ್ತಾರೆ. ತಪ್ಪು ಮಾಡಿದವರೆಲ್ಲಾ ಈ ರೀತಿ ಜೈಲಿಗೆ ಹೋಗ್ತಾ ಇರ್ತಾರೆ. ಇದು ಭವಿಷ್ಯ ಅಲ್ಲ. ಹೋಗಿ ಬಂದಿದ್ದಾರೆ ಅಲ್ವ. ಮತ್ತೆ ಹೋಗ್ತಾರೆ. ಕಾನೂನು ಬಾಹಿರ ಚಟುವಟಿಕೆ ಮಾಡಿ ಅಕ್ರಮವಾಗಿ ಸಂಪಾದನೆ ಮಾಡಿದೋರು ಜೈಲಿಗೆ ಹೋಗ್ತಾರೆ. ಯಾರೇ ತಪ್ಪು ಮಾಡಿದ್ರು ಶಿಕ್ಷೆ ಅನುಭವಿಸಬೇಕು. ಡಿ ಕೆ ಶಿವಕುಮಾರ್ ಮೈತುಂಬಾ ಕಾಯಿಲೆ ಅಂಟಿಸಿಕೊಂಡು, ರೋಗಗ್ರಸ್ತರಾಗಿದ್ದಾರೆ ಎಂದು ಸಚಿವ ಅಶ್ವತ್ಥನಾರಾಯಣ ಆರೋಪಿಸಿದರು.

ಸಚಿವ ಡಾ ಅಶ್ವತ್ಥ್​ ನಾರಾಯಣ್

ಡಿ ಕೆ ಶಿವಕುಮಾರ್ ಅವರು ಜೈಲಿಗೆ ಹೋಗುತ್ತಾರೆ: ಡಿ ಕೆ ಶಿವಕುಮಾರ್ ಭ್ರಷ್ಟಾಚಾರಿ, ಮಾಲ್ ಪ್ರಾಕ್ಟೀಸ್, ಅಕ್ರಮ ಮಾಡಿ ಮತದಾರರ ಗುರುತಿನ ಚೀಟಿ ಕದ್ದೋರು. ಅವರ ಹಾಗೆ ಕೊತ್ವಾಲ್ ನಂತ ಹಿನ್ನೆಲೆ ಇಟ್ಟುಕೊಂಡಿಲ್ಲ. ಅವರ ಹತ್ತಿರ ಟೀ ಕುಡ್ಕೊಂಡು ಇದ್ದವನಲ್ಲ. ನಾನು ಜನನಾಯಕ. ಇವರ ಹಿನ್ನೆಲೆ ನೋಡಿದ್ರೆ ಕಾಡು, ಬೆಟ್ಟ, ನಾಡು ನುಂಗಿ ಸಿಕ್ಕಿದ್ದನ್ನೆಲ್ಲಾ ಕಬಳಿಸಿಕೊಂಡಿದ್ದಾರೆ. ಡಿಕೆಶಿ ಜೇಬು ಕಳ್ಳರಿದ್ದ ಹಾಗೆ. ಇಂತಹವರು ಮೌಲ್ಯಗಳ ಬಗ್ಗೆ ಮಾತಾಡೋಕೆ ಯಾವ ನೈತಿಕತೆ ಇದೆ. ಪಿಶಾಚಿಗಳ ಕೈಲಿ ಭಗವದ್ಗೀತೆ ಹೇಳಿದ ರೀತಿ ಆಯ್ತು. ಇಂತಹ ಹಿನ್ನೆಲೆ ಇರುವಂತಹ ಡಿ ಕೆ ಶಿವಕುಮಾರ್ ಅವರು ಜೈಲಿಗೆ ಹೋಗುತ್ತಾರೆ.

ಚುನಾವಣೆ ಆಯೋಗದಿಂದ ಮಾಡ್ತಿರುವ ಪ್ರಕ್ರಿಯೆ ಇದು. ತಪ್ಪು ಮಾಡಿದ್ರೆ ಅವರಿಗೆ ಶಿಕ್ಷೆ ಆಗುತ್ತದೆ. ನಮ್ಮ ಸರ್ಕಾರದಲ್ಲಿ ತನಿಖೆ ಮಾಡಿದ ರೀತಿ ಇವರು ತನಿಖೆ ಮಾಡ್ತಾರಾ. ಸಿದ್ದರಾಮಯ್ಯ ಸರ್ಕಾರದಲ್ಲಿ ಆಗಿರುವ ಅಕ್ರಮಗಳನ್ನು ನೋಡಿದ್ರೆ ಇವರೆಲ್ಲ ಜೈಲಿನಲ್ಲಿ ಇರಬೇಕಿತ್ತು ಎಂದು ಸಚಿವರು ಟಾಂಗ್​ ಕೊಟ್ಟರು.

ಭ್ರಷ್ಟಾಚಾರಿಗಳಿಗೆ ನಾನು ಸಿಂಹಸ್ವಪ್ನ: ಡಿಕೆಶಿ ಹಾಗೂ ಸಿದ್ದರಾಮಯ್ಯ ಎಲ್ಲರೂ ಪರ್ಮನೆಂಟ್ ಆಗಿ ಜೈಲಿನಲ್ಲಿ ಇರಬೇಕಿತ್ತು. ಭ್ರಷ್ಟಾಚಾರವನ್ನು ಮೈಗೂಡಿಸಿಕೊಂಡು ಬಂದವರು ಕಾಂಗ್ರೆಸ್ ಪಕ್ಷದವರು. ಸ್ವಾರ್ಥಕ್ಕಾಗಿ ರಾಜಕಾರಣಕ್ಕೆ ನಾನು ಬಂದಿಲ್ಲ. ಇಂತಹ ಭ್ರಷ್ಟಾಚಾರಿಗಳ ಬಗ್ಗೆ ನಾನು ಸಿಂಹಸ್ವಪ್ನ ಆಗಿದ್ದೇನೆ. ಬೆಂಗಳೂರಿನಲ್ಲಿ ಟೆಕ್ ಸಬ್ ಮಿಷನ್ ಕಾರ್ಯಕ್ರಮ ನಡೆಯುತ್ತಿತ್ತು. ಕಾಂಗ್ರೆಸ್ ನವರ ಯೋಗ್ಯತೆಗೆ ಒಂದು ಮಾತು ಆಡಿಲ್ಲ. ಈ ವೇಳೆ ಮತದಾರ ಚೀಟಿ ಬಗ್ಗೆ ಮಾತಾಡ್ತಾರೆ. ಜನರ ಆಶಯ ಇಲ್ಲದ ಪಕ್ಷ ಡಬ್ಬ ಆಡಿಸೋ ಪಕ್ಷ ಅಂದ್ರೆ ಕಾಂಗ್ರೆಸ್ ಪಕ್ಷ ಎಂದರು.

ಡಿಕೆಶಿ ಬಗ್ಗೆ ಎಲ್ಲರಿಗೂ ಗೊತ್ತಿದೆ: ತಪ್ಪು ಮಾಡಿರುವವರು ಜೈಲಿಗೆ ಹೋಗ್ತಾರೆ ಅಂತಾ ಹೇಳಿದ್ದೇನೆ. ಡಿ ಕೆ ಶಿವಕುಮಾರ್ ಜೈಲಿಗೆ ಹೋಗಿದ್ದಾರೆ. ತಪ್ಪು ಮಾಡಿರುವವರು ಪದೇ ಪದೆ ಜೈಲಿಗೆ ಹೋಗ್ತಾರೆ. ಅವರಿಗೇನು ಪ್ಲಾನ್ ಮಾಡಬೇಕಾ? ಅವರೇ ಗುಂಡಿ ತೋಡಿಕೊಂಡಿದ್ದಾರೆ. ಡಿಕೆಶಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇವರಿಗೇನಾದ್ರೂ ಒಳ್ಳೆತನ ಇದ್ಯಾ. ಇಂತಹವರು ಇರಬೇಕಾದ ಜಾಗ ಅದು ಜೈಲು ಎಂದು ಭವಿಷ್ಯ‌ ನುಡಿದರು.

ದಲಿತರಿಗೆ ಮೀಸಲಿಟ್ಟ ಹಣ ದುರುಪಯೋಗ ವಿಚಾರವಾಗಿ ಸಿದ್ದರಾಮಯ್ಯ ಟ್ವೀಟ್ ಮಾಡಿದ ಬಗ್ಗೆ ಮಾತನಾಡಿದ ಅವರು, ಇವರು ದಲಿತರ ಬಗ್ಗೆ ಮಾತಾಡ್ತರಾ. ಇವರಿಗೆ ದಲಿತರ ಬಗ್ಗೆ ಏನು ಕಾಳಜಿ ಇದೆ. ಇವರಿಗೆ ಕೇವಲ ಕುಟುಂಬದ ಬಗ್ಗೆ ಮಾತ್ರ ಕಾಳಜಿ ಇರುವಂತಹುದು. ಕೇವಲ ಭ್ರಷ್ಟಾಚಾರ ಮಾಡೋದು ಮಾತ್ರ. ಸಿದ್ದರಾಮಯ್ಯ ಅವರಿಗೆ ಕಾಣುತ್ತದೆ. ಇಲ್ಲಿ ಏನು‌ ಮುಚ್ಚಿಡಲಿಕ್ಕೆ ಸಾಧ್ಯವಿಲ್ಲ. ಕಾನೂನಿನಲ್ಲಿ ಏನು ಅವಕಾಶ ಇದೆ ಅದೇ ರೀತಿ ನಡೆಯುತ್ತೇವೆ. ಕಾನೂನು ಉಲ್ಲಂಘನೆ ಮಾಡೋದು ಯಾರು ಅಂದ್ರೆ ಅದು ಕಾಂಗ್ರೆಸ್ ಪಕ್ಷ ಎಂದು ಇದೇ ವೇಳೆ ಸಚಿವರು ತಿಳಿಸಿದ್ದಾರೆ.

ಓದಿ:ನವೆಂಬರ್​ 16ರಿಂದ ಬೆಂಗಳೂರು ಟೆಕ್ ಸಮ್ಮಿಟ್, ಪ್ರಧಾನಿ ಉದ್ಘಾಟನೆ: ಅಶ್ವತ್ಥ್​ ನಾರಾಯಣ್​

ABOUT THE AUTHOR

...view details