ಕರ್ನಾಟಕ

karnataka

ETV Bharat / state

ರಾಮನಗರ: ಜಿಂಕೆ ಕೊಂಬು ಮಾರಾಟಕ್ಕೆ ಯತ್ನಿಸಿದ ವ್ಯಕ್ತಿ ಬಂಧನ - Kanakapura Police Station

ಕೃಷ್ಣ ಮೃಗಗಳನ್ನು ಬೇಟೆಯಾಡಿ ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಕನಪುರದಲ್ಲಿ ಬಂಧಿಸಲಾಗಿದೆ.

dsd
ಜಿಂಕೆ ಕೊಂಬು ಮಾರಾಟಕ್ಕೆ ಯತ್ನಿಸಿದ ವ್ಯಕ್ತಿ ಬಂಧನ

By

Published : Oct 24, 2020, 5:21 PM IST

ರಾಮನಗರ: ಕಾವೇರಿ ವನ್ಯ ಜೀವಿ ವಲಯದಲ್ಲಿ ಜಿಂಕೆ ಬೇಟೆಯಾಡಿದ್ದ ಓರ್ವನನು ಬಂಧಿಸಿ ಸುಮಾರು‌ 15 ಜಿಂಕೆ ಕೊಂಬುಗಳನ್ನು ಕನಕಪುರ ವೃತ್ತ ಮಟ್ಟದ ವಿಶೇಷ ಅಪರಾಧ ಪತ್ತೆ ದಳ ವಶಕ್ಕೆ ಪಡೆದಿದೆ.

ಜಿಂಕೆ ಕೊಂಬು ಮಾರಾಟಕ್ಕೆ ಯತ್ನಿಸಿದ ವ್ಯಕ್ತಿ ಬಂಧನ

ಸಾತನೂರು ಹೋಬಳಿ ಭೂಹಳ್ಳಿ ಗ್ರಾಮದ ಬಸವಯ್ಯ ಬಂಧಿತ ಆರೋಪಿ. ಪಟ್ಟಣದ ಲಗುನಾ ಗಾರ್ಮೆಂಟ್ಸ್ ಹಿಂಭಾಗದಲ್ಲಿರುವ ಪೈಪ್​ಲೈನ್ ರಸ್ತೆಯಲ್ಲಿ ಬಿಳಿ ಬ್ಯಾಗ್​ ಹಿಡಿದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈತನನ್ನು ಕನಕಪುರ ಪೊಲೀಸರು ಬಂಧಿಸಿದ್ದಾರೆ. ಈತ ವಿಚಾರಣೆ ವೇಳೆ ಸಾರ್ವಜನಿಕರಿಗೆ ಪ್ರವೇಶವಿಲ್ಲದ ಮುತ್ತತ್ತಿ ವನ್ಯ ಜೀವಿ ಮೀಸಲು ಅರಣ್ಯದಲ್ಲಿ ಜಿಂಕೆಗಳನ್ನು ಬೇಟೆಯಾಡುತ್ತಿದ್ದೆ.

ನಂತರ ಕೊಂಬುಗಳನ್ನು ಕಾಡಿನಲ್ಲಿಯೇ ಬಚ್ಚಿಟ್ಟು ಕೆಲ ದಿನಗಳ ನಂತರ ಮಾರಾಟ ಮಾಡಲು ಪಟ್ಟಣಕ್ಕೆ ಬಂದಿದ್ದನೆಂದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ವನ್ಯ ಜೀವಿ ಬೇಟೆ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ABOUT THE AUTHOR

...view details