ಕರ್ನಾಟಕ

karnataka

ETV Bharat / state

ರಾಮನಗರ: ಲಾರಿ ಅಡ್ಡಗಟ್ಟಿ ₹7.5 ಲಕ್ಷ ದೋಚಿದ ಆರೋಪಿಗಳ ಬಂಧನ

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಆಗಸ್ಟ್​ 3 ರಂದು ಆಂಧ್ರಪ್ರದೇಶಕ್ಕೆ ಕುರಿ ತರಲು ಹೊರಟಿದ್ದ ಲಾರಿ ಅಡ್ಡಗಟ್ಟಿ 13 ಲಕ್ಷ ರೂ ದೋಚಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

R_kn_rmn_01_11082022_aqused_arrest_KA10051
ದರೋಡೆಕೋರರು

By

Published : Aug 11, 2022, 5:59 PM IST

ರಾಮನಗರ:ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಲಾರಿ ಅಡ್ಡಗಟ್ಟಿ ದರೋಡೆ ನಡೆಸಿದ್ದ ಆರೋಪಿಗಳನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ. ಲಾರಿ ಚಾಲಕ ಲಿಯಾಕತ್ ಪ್ರಕರಣದ ಮುಖ್ಯ ಆರೋಪಿ. ಆತನ ಮಗ ಬಷೀರ್ ಖಾನ್, ಸ್ನೇಹಿತರಾದ ತಬ್ರೇಜ್, ವಾಸು, ವಿನೋದ್, ಮನೋಜ್ ಬಂಧಿತರು. ಪ್ರೇಮ್​ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಆಗಸ್ಟ್ 3ರಂದು ಮಾದಾಪುರ ಬಳಿ ಇಲಿಯಾಜ್​ ಖಾನ್ ಕುರಿಗಳನ್ನು ತರಲು ಬಾಡಿಗೆ ಲಾರಿ ಮಾಡಿಕೊಂಡು ಆಂಧ್ರಪ್ರದೇಶಕ್ಕೆ ಹೊರಟಿದ್ದರು. ಈ ವಿಷಯವನ್ನು ಮುಂಚಿತವಾಗಿಯೇ ತಿಳಿದ ಲಿಯಾಕತ್ ತನ್ನ ಮಗನ ಮೂಲಕ ದರೋಡೆಗೆ ಸಂಚು ರೂಪಿಸಿ, ಮಾದಾಪುರ ಬಳಿ ರಾತ್ರಿ 2 ಗಂಟೆ ಸುಮಾರಿಗೆ ತಮ್ಮ ಲಾರಿಯಿಂದ ಇಲಿಯಾಜ್​ ಖಾನ್ ಅವರ ಲಾರಿ ಅಡ್ಡಗಟ್ಟಿ ಹಲ್ಲೆ ಮಾಡಿ ಹಣ ದೋಚಿದ್ದರು.

ಈ ಕುರಿತು ಇಲಿಯಾಜ್​ ಖಾನ್ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ 6 ಜನರ ಪೈಕಿ ಐವರನ್ನು ಬಂಧಿಸಿದ್ದಾರೆ. ಬಂಧಿತರು ಮಂಡ್ಯ ಮೂಲದವರಾಗಿದ್ದಾರೆ. 7.5 ಲಕ್ಷ ರೂ ಹಣ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ:ಸಿಗರೇಟ್ ಹೊಗೆ ಬಿಟ್ಟಿದ್ದಕ್ಕೆ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ: ವಿಡಿಯೋ ವೈರಲ್​

ABOUT THE AUTHOR

...view details