ಕರ್ನಾಟಕ

karnataka

ETV Bharat / state

ಟೀಕೆ ಬಿಟ್ಟು ಸರ್ಕಾರಕ್ಕೆ ಸಲಹೆ ಕೊಡಲಿ, ನಾವು ಸ್ವೀಕರಿಸುತ್ತೇವೆ: ಸಚಿವ ಮುರುಗೇಶ್​ ನಿರಾಣಿ - leave the criticism

ಮೊದಲು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದರು. ಈಗ ಲಸಿಕೆ ಇಲ್ಲ ಎಂದು ಹೇಳ್ತಿದ್ದಾರೆ, ಇದು ರಾಜಕೀಯ ಮಾಡುವ ಸಮಯ ಅಲ್ಲ. ವಿರೋಧ ಪಕ್ಷದವರು ಸರ್ಕಾರಕ್ಕೆ ಸಲಹೆ ಕೊಡಲಿ, ನಾವು ಸ್ವೀಕರಿಸುತ್ತೇವೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಸಚಿವ ನಿರಾಣಿ
ಸಚಿವ ನಿರಾಣಿ

By

Published : May 22, 2021, 3:28 PM IST

ರಾಮನಗರ:ರಾಜ್ಯದಲ್ಲಿ ಲಸಿಕೆ ಅಭಾವ ಇದೆ. ಲಸಿಕೆ ತೆಗೆದುಕೊಳ್ಳಲು ಹಣದ ಕೊರತೆ ಇಲ್ಲ. ಆದರೆ ಮಾರ್ಕೆಟ್​ನಲ್ಲಿ ಲಸಿಕೆ ಸಿಗ್ತಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ವಿರೋಧ ಪಕ್ಷದ ಮುಖಂಡರಿಗೆ ಟಾಂಗ್ ನೀಡಿದ್ದಾರೆ.

ರಾಮನಗರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿ, ರಾಜ್ಯದ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ರಾಜ್ಯ ಸರ್ಕಾರ ಕೂಡ ಅದೇ ಪ್ರಯತ್ನದಲ್ಲಿದೆ. ಆದಷ್ಟು ಬೇಗ ಲಸಿಕೆ ಬರಲಿದೆ ಎಂದು ತಿಳಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಮುರುಗೇಶ್​​ ನಿರಾಣಿ

ಈ ಸಂದರ್ಭದಲ್ಲಿ ವಿರೋಧ ಪಕ್ಷದವರು ಟೀಕೆ ಮಾಡ್ತಿದ್ದಾರೆ. ಮೊದಲು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದರು. ಈಗ ಲಸಿಕೆ ಇಲ್ಲ ಎಂದು ಹೇಳ್ತಿದ್ದಾರೆ, ಇದು ರಾಜಕೀಯ ಮಾಡುವ ಸಮಯ ಅಲ್ಲ. ಅವರು ಸರ್ಕಾರಕ್ಕೆ ಸಲಹೆ ಕೊಡಲಿ, ನಾವು ಸ್ವೀಕರಿಸುತ್ತೇವೆ. ಮೊದಲು ಟೀಕೆ ಮಾಡೋದನ್ನ ಬಿಟ್ಟು ಸರ್ಕಾರಕ್ಕೆ ಸಲಹೆ ಸೂಚನೆ ನೀಡಲಿ ಎಂದರು.

ABOUT THE AUTHOR

...view details