ರಾಮನಗರ:ನಿತ್ಯಾನಂದ ವಿರುದ್ಧ ಗುಜರಾತ್ ಹೈ ಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರನ್ನು ಹುಡುಕಿಕೊಂಡು ಗುಜರಾತ್ ಪೊಲೀಸರು ಬಿಡದಿಗೆ ಭೇಟಿ ನೀಡಿದ್ದಾರೆ.
ಸರ್ಚ್ ವಾರಂಟ್ ಹಿಡಿದು ಬಿಡದಿ ನಿತ್ಯಾನಂದ ಆಶ್ರಮಕ್ಕೆ ಬಂದ ಗುಜರಾತ್ ಪೊಲೀಸರು!
ಜನಾರ್ದನ ಶರ್ಮ ತಮ್ಮ ಮಗಳ ವಿಚಾರವಾಗಿ ಗುಜರಾತ್ ಹೈ ಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಹಾಕಿದ್ದು, ಈ ಹಿನ್ನಲೆಯಲ್ಲಿ ಗುಜರಾತ್ ಪೊಲೀಸರು ಸರ್ಚ್ ವಾರೆಂಟ್ ಮೂಲಕ ನಿತ್ಯಾನಂದನನ್ನು ಹುಡುಕಿಕೊಂಡು ಬಿಡದಿಯ ಆಶ್ರಮಕ್ಕೆ ಬಂದಿದ್ದಾರೆ. ಕಳೆದ ವಾರ ಸಿಐಡಿ ಪೊಲೀಸರು ಸಹ ಬಿಡದಿ ಆಶ್ರಮಕ್ಕೆ ಭೇಟಿ ನೀಡಿದ್ದರು.
ಬಿಡದಿ ಪೊಲೀಸ್ ಠಾಣೆ

ನಿತ್ಯಾನಂದ ದೇಶ ಬಿಟ್ಟು ಪರಾರಿಯಾಗಿದ್ದು, ಸದ್ಯಕ್ಕೆ ಅಮೇರಿಕ ಸಮೀಪದ ಬಿಲೀಜ್ ದ್ವೀಪದಲ್ಲಿ ಇರುವುದಾಗಿ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.