ರಾಮನಗರ :ಕ್ಷುಲ್ಲಕ ಕಾರಣಕ್ಕೆ ಮಗಳೇ ಜನ್ಮ ಕೊಟ್ಟ ತಂದೆಯನ್ನು ಕೊಲೆ ಮಾಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಚನ್ನಪಟ್ಟಣ ತಾಲೂಕಿನ ನಾಯಿದೊಳ್ಳೆ ಗ್ರಾಮದಲ್ಲಿ ಗುದ್ದಲಿಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹುಚ್ಚೀರಯ್ಯ (68) ಮಗಳಿಂದಲೇ ಕೊಲೆಯಾದ ತಂದೆ. ಪುಷ್ಪ (30) ಹತ್ಯೆ ಮಾಡಿದ ಆರೋಪಿ ಮಗಳು.
ಆರೋಪಿ ಪುಷ್ಪ ಗಂಡನನ್ನು ಬಿಟ್ಟು ಬಂದು ಹಲವು ವರ್ಷಗಳಿಂದ ತಂದೆ ಮನೆಯಲ್ಲೇ ವಾಸವಿದ್ದರು. ಈಕೆ ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಳು ಎನ್ನಲಾಗಿದೆ. ಇತ್ತೀಚೆಗೆ ತಂದೆ-ಮಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಈ ವೇಳೆ ಸಿಟ್ಟಿಗೆದ್ದ ಮಗಳು ಗುದ್ದಲಿಯಿಂದ ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾಳೆ.
ಹೀಗಾಗಿ ತೀವ್ರ ರಕ್ತಸ್ರಾವದಿಂದ ತಂದೆ ಸ್ಥಳದಲ್ಲೇ ಸಾವನ್ನಪಿದ್ದಾರೆ. ಘಟನೆ ಬಳಿಕ ಆತಂಕಗೊಂಡ ಪುಷ್ಪಾ ಸ್ಥಳದಿಂದ ಪರಾರಿಯಾಗಿದ್ದಾಳೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿರುವ ಚನ್ನಪಟ್ಟಣ ತಾಲೂಕಿನ ಎಂ.ಕೆ ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಗನ ಹುಟ್ಟುಹಬ್ಬದಂದು ಅಪ್ಪನ ಹತ್ಯೆ( ಬಳ್ಳಾರಿ) : ಕಳೆದ ರಾತ್ರಿ ಬಳ್ಳಾರಿ ಹೊರವಲಯದ ಗುಗ್ಗರಹಟ್ಟಿಯ ಕೃಷ್ಣಾ ಕಾಲೋನಿಯಲ್ಲಿ ಕೆಆರ್ಪಿಪಿ ಕಾರ್ಯಕರ್ತನಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೆಹಬೂಬ್ ಬಾಷಾರನ್ನು ಕಾಂಗ್ರೆಸ್ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಳ್ಳಾರಿ ನಿವಾಸಿ ಮೆಹಬೂಬ್ ಬಾಷಾ, ಕೆಆರ್ಪಿಪಿ ಪಕ್ಷದ ಕಾರ್ಯಕರ್ತರಾಗಿದ್ದರು. ಮೆಹಬೂಬ್ ಬಾಷಾ ಮಗನ ಹುಟ್ಟುಹಬ್ಬದ ಹಿನ್ನೆಲೆ ಕೇಕ್ ತೆಗೆದುಕೊಂಡು ಮನೆಗೆ ಬಂದಿದ್ದರು.