ಕರ್ನಾಟಕ

karnataka

ETV Bharat / state

ರಾಮನಗರ ಜಿಲ್ಲೆಯ ಎಲ್ಲಾ ಕೆರೆಗಳಿಗೆ ಕಾವೇರಿ ನೀರು: ಡಿಸಿಎಂ ಅಶ್ವತ್ಥ ನಾರಾಯಣ

ರಾಷ್ಟ್ರಮಟ್ಟದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ರಾಜ್ಯದಲ್ಲಿಯೂ ಶಕ್ತಿಶಾಲಿಯಾಗಿದೆ. ಹಾಗೆಯೇ ಗ್ರಾಮ ಮಟ್ಟದಲ್ಲಿಯೂ ಪಕ್ಷ ಸಂಘಟಿತವಾಗಿ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲಾ ಜಾತಿ-ಜನಾಂಗದ ಪಕ್ಷವಾಗಿ ಬಿಜೆಪಿಯನ್ನು ಬೆಳೆಸಬೇಕು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥ​ ನಾರಾಯಣ ಹೇಳಿದರು.

Gram Swarajya Conference in Ramanagar Taluk
ರಾಮನಗರ ತಾಲೂಕಿನ ಕೂಟಗಲ್ಲು ಗ್ರಾಮದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ

By

Published : Dec 1, 2020, 10:40 PM IST

ರಾಮನಗರ: ಕಾವೇರಿ ನದಿ ನೀರಿನಿಂದ ರಾಮನಗರ ಜಿಲ್ಲೆಯ ಎಲ್ಲಾ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲಾಗುವುದು ಎಂದು ಘೋಷಿಸಿದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ, ಇನ್ನು ಒಂದು ವರ್ಷದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.

ರಾಮನಗರ ತಾಲೂಕಿನ ಕೂಟಗಲ್ಲು ಗ್ರಾಮದಲ್ಲಿ ಗ್ರಾಮ ಸ್ವರಾಜ್​ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಎರಡು ಲಕ್ಷ ಮನೆಗಳಿಗೂ ನದಿ‌ ಮೂಲದ ನೀರು ಕೊಡಲಾಗುವುದು. ಶುದ್ಧ ಕುಡಿಯುವ ನೀರು ಕೊಡುವುದು ಸರ್ಕಾರದ ಬದ್ಧತೆ. ಅದರಂತೆ ಯಡಿಯೂರಪ್ಪ ಅವರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಮಹಾತ್ವಾಕಾಂಕ್ಷೆಯ ಶ್ರೀರಂಗ ಯೋಜನೆಗೆ ಹೆಚ್ಚುವರಿಯಾಗಿ ₹175 ಕೋಟಿ ಕೊಡುತ್ತಿದ್ದೇವೆ. ಇದರಿಂದ ಜಿಲ್ಲೆಗೆ ಸಾಕಷ್ಟು ಅನುಕೂಲವಾಗುತ್ತದೆ. ಕೋವಿಡ್‌ನಂತಹ ಕಷ್ಟ ಕಾಲದಲ್ಲಿ ರಾಮನಗರದ ಜಿಲ್ಲಾ ಕೇಂದ್ರದಲ್ಲಿ ಸರಿಯಾಗಿ ಆಸ್ಪತ್ರೆ ಇರಲಿಲ್ಲ. ಒಂದು ಐಸಿಯು ಘಟಕವೂ ಇರಲಿಲ್ಲ. ಇಷ್ಟು ದಿನ‌ ಅಧಿಕಾರ ಅನುಭವಿಸಿದವರು ಇಷ್ಟೇನಾ ಮಾಡುವುದು ಎಂಬ ಪ್ರಶ್ನೆ ನನಗೆ ಮೂಡಿತು. ಕೇವಲ ತಾವು ಮತ್ತು ತಮ್ಮ ಹಿಂಬಾಲಕರಿಗಷ್ಟೇ ಅನುಕೂಲ ಮಾಡಿಕೊಂಡರು ಎಂದು ಡಿಸಿಎಂ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯಲ್ಲಿ ಜಾಗತಿಕ ಗುಣಮಟ್ಟದ ರೇಷ್ಮೆ ಮಾರುಕಟ್ಟೆ ಮತ್ತು‌ ಮಾವಿನ‌ ಸಂಸ್ಕರಣ ಘಟಕ ಸ್ಥಾಪನೆ ಮಾಡಲಾಗುತ್ತಿದೆ. ಕೃಷಿ, ತೋಟಗಾರಿಕೆ, ಶಿಕ್ಷಣ, ಆರೋಗ್ಯ, ನೀರಾವರಿ, ಪ್ರವಾಸೋದ್ಯಮ ಸೇರಿದಂತೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಬಿಜೆಪಿ ಸರ್ಕಾರ ಉತ್ತಮ ಕೆಲಸ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ABOUT THE AUTHOR

...view details