ರಾಮನಗರ:ಬಿಟ್ ಕಾಯಿನ್ ಹಗರಣದ(Bitcoin Scam) ಬಗ್ಗೆ ತನಿಖೆ ನಡೆಸಲು ನಮ್ಮ ಸರ್ಕಾರ ಸಿದ್ಧವಿದೆ. ಈಗಾಗಲೇ ಕೇಂದ್ರ ತನಿಖಾ ಏಜೆನ್ಸಿಗಳ ಮೂಲಕ ತನಿಖೆ ಮಾಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿದ್ಧರಿದ್ದಾರೆ ಎಂದು ಸಚಿವ ಉತನ್ನ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ರಾಮನಗರ ಜಿಲ್ಲೆ ಮಾಗಡಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷದವರು ಏನಾದರೂ ಸಾಕ್ಷಿ ಇದ್ದರೆ ಮಂಡಿಸಲಿ, ಪುರಾವೆ ಇದ್ದರೆ ಹಂಚಿಕೊಳ್ಳಲಿ, ಸರ್ಕಾರಕ್ಕೂ ಕೊಡಿ ಎಂದು ಮನವಿ ಮಾಡಿದರು.
ಬಿಟ್ ಕಾಯಿನ್ ಪ್ರಕರಣದ ವಿಚಾರಣೆ ನಡೆಯಬೇಕಾದರೆ ಏನು ಹೇಳಲು ಸಾಧ್ಯ?. ಅವರು ಅಧಿಕಾರದಲ್ಲಿ ಇದ್ದರೂ ಆಗ ಪ್ರಕರಣಗಳ ತನಿಖೆ ನಡೆಯಬೇಕಾದರೆ ಯಾವ್ಯಾವ ಮಾಹಿತಿ ಹೇಳಿದ್ದಾರೋ ಅದನ್ನೆಲ್ಲಾ ಹೇಳಬೇಕು. ಅರ್ಕಾವತಿ ವಿಚಾರದಲ್ಲಿ ಕೆಂಪಣ್ಣ ಆಯೋಗದ ತನಿಖೆ ಬಗ್ಗೆ ಏನಾದರೂ ಹೇಳಿದ್ರಾ? ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕದಲ್ಲಿ ಉಲ್ಲಂಘನೆಯಾಗಿತ್ತು. ಅದರ ಬಗ್ಗೆ ಏನಾದರೂ ಹೇಳಿದ್ರಾ? ನಮ್ಮ ಪ್ರತಿಪಕ್ಷದ ನಾಯಕರ ಮೇಲೆ ಹಲವು ಆರೋಪಗಳಿವೆ. ಇದಲ್ಲದೆ ಕೆಪಿಸಿಸಿ ಅಧ್ಯಕ್ಷರ ಮೇಲೆ ಹಲವಾರು ಆಪಾದನೆ ಇವೆ. ಹಿಟ್ ಅಂಡ್ ರನ್ ರೀತಿ ಬೇಡ, ಪುರಾವೆ ಇದ್ದರೆ ಮಂಡಸಲಿ ಎಂದು ಸಚಿವರು ಹೇಳಿದರು.