ಕರ್ನಾಟಕ

karnataka

ETV Bharat / state

ರಾಮನಗರದಲ್ಲಿ ರೌಡಿ ಶೀಟರ್​ನ ಬರ್ಬರ ಹತ್ಯೆ - ರಾಮನಗರದ ಕೆರೆಮೇಗಳ ದೊಡ್ಡಿ ಗ್ರಾಮ

ರಾಮನಗರದ ಕೆರೆಮೇಗಳ ದೊಡ್ಡಿ ಗ್ರಾಮದಲ್ಲಿ ರೌಡಿ ಶೀಟರ್​ ಲೋಕೇಶ್​ ಕೊಲೆಗೀಡಾಗಿದ್ದಾನೆ.

ಹತ್ಯೆ
ಹತ್ಯೆ

By ETV Bharat Karnataka Team

Published : Oct 15, 2023, 10:25 AM IST

Updated : Oct 15, 2023, 11:48 AM IST

ರಾಮನಗರ:ರಾಮನಗರದ ಕೆರೆಮೇಗಳ ದೊಡ್ಡಿ ಗ್ರಾಮದಲ್ಲಿ ರೌಡಿ ಶೀಟರ್​ನ ಬರ್ಬರ ಹತ್ಯೆಯಾಗಿದೆ. ಲೋಕೇಶ್​​ (38) ಕೊಲೆಗೀಡಾದ ರೌಡಿ ಶೀಟರ್.​​ ಈತ ತಾಲೂಕಿನ ಕೆರೆಮೇಗಳ ದೊಡ್ಡಿ ಗ್ರಾಮದವನಾಗಿದ್ದು, ಕಳೆದ ರಾತ್ರಿ ದುಷ್ಕರ್ಮಿಗಳು ಲಾಂಗ್​ನಿಂದ ಕೊಚ್ಚಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಸ್ನೇಹಿತರ ಜೊತೆ ಮದ್ಯ ಕುಡಿಯಲು ಹೋಗಿದ್ದ ವೇಳೆ ದುಷ್ಕರ್ಮಿಗಳು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.

ಸ್ಥಳಕ್ಕೆ ರಾಮನಗರ ಎಸ್ಪಿ ಭೇಟಿ:ಸ್ನೇಹಿತರೊಂದಿಗೆ ಹೋದ ಸಂದರ್ಭದಲ್ಲಿ ಕೊಲೆ ಮಾಡಲಾಗಿದೆ. ಹಣಕಾಸಿನ ವಿಚಾರಕ್ಕೆ ಕೊಲೆ ಆಗಿರಬಹುದೆಂದು ಅನುಮಾನಿಸಲಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. ಇನ್ನು, ಘಟನಾ ಸ್ಥಳಕ್ಕೆ ಎಎಸ್ಪಿ ಸುರೇಶ್, ಡಿವೈಎಸ್ಪಿ ದಿನಕರ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಇತ್ತೀಚಿನ ಪ್ರಕರಣ- ಅನೈತಿಕ ಸಂಬಂಧದ ಅನುಮಾನಕ್ಕೆ ಪತ್ನಿ ಬಲಿ:ಇನ್ನು ಮೊನ್ನೆ ತಾನೇ ಚಿಕ್ಕಮಗಳೂರಿನಲ್ಲಿಯೂ ಒಂದು ಕೊಲೆ ನಡೆದಿತ್ತು. ಕುಡಿದ ಮತ್ತಿನಲ್ಲಿ ಪತಿಯೊಬ್ಬ ತನ್ನ ಪತ್ನಿ ಮೇಲೆ ಅನೈತಿಕ ಸಂಬಂಧದ ಅನುಮಾನ ಪಟ್ಟು ಮಾರಣಾಂತಿಕ ಹಲ್ಲೆ ಮಾಡಿದ್ದು ಗಂಭೀರ ಗಾಯದಿಂದ ಪತ್ನಿ ಸಾವನ್ನಪ್ಪಿದ್ದಳು. ಕೊಡಲಿಯಿಂದ ಹಲ್ಲೆಗೈದ ಪತಿ ಆಕೆಯನ್ನು ಮನೆಯಿಂದ ಹೊರತಳ್ಳಿ ಬಾಗಿಲು ಹಾಕಿಕೊಂಡು ಮಲಗಿದ್ದಾನೆ. ಕೊಡಲಿಯಿಂದ ಹಲ್ಲೆಗೈದಿದ್ದರಿಂದ ಇಡೀ ರಾತ್ರಿ ರಕ್ತಸ್ರಾವವುಂಟಾಗಿ ಮಹಿಳೆ ಪದ್ಮಾಕ್ಷಿ ಅತಿಯಾದ ಶೀತದಿಂದ ಸ್ಥಳದಲ್ಲೇ ಸಾವಿಗೀಡಾಗಿದ್ದಾಳು. ಪತ್ನಿಗೆ ಹೊಡೆದು ಹೊರ ತಳ್ಳಿ ಮಲಗಿದ್ದ ಪತಿ ಚಂದ್ರ ಬೆಳಗ್ಗೆ ಎದ್ದು ನೋಡಿದಾಗ ಪತ್ನಿ ಸಾವಿಗೀಡಾಗಿದ್ದನ್ನು ಕಂಡು ಪತ್ನಿಯ ಶವದ ಮುಂದೆ ಕೂತು ಕಣ್ಣೀರಿಟ್ಟಿದ್ದನು. ಈ ಕುರಿತು ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದಕ್ಕೂ ಮುನ್ನ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ಮಗಳನ್ನು ತಾಯಿಯೇ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಬೇಗಮ್‌ಬಿ ತಾಯಿಯಾಗಿದ್ದು ತನ್ನ ಮಗಳು ಶಮಬಾನು ಅನ್ನು ಕೊಲೆ ಮಾಡಿ ಮಗ ಅಮಾನುಲ್ಲಾ ಮೇಲೆಯೂ ಹಲ್ಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಳು. ಘಟನೆಯಲ್ಲಿ ತಾಯಿ, ಮಗಳು ಪ್ರಾಣ ಕಳೆದುಕೊಂಡರೆ ಮಗ ಬದಕಿದ್ದು ದಾವಣಗೆರೆ ಆಸ್ಪತ್ರೆಗೆ ಚಿಕಿತ್ಸೆಗೆ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ವಿಜಯನಗರ: ಮಗಳ ಕೊಲೆ ಮಾಡಿ ತಾಯಿ ಆತ್ಮಹತ್ಯೆ, ಮಗ ಆಸ್ಪತ್ರೆಗೆ ದಾಖಲು

Last Updated : Oct 15, 2023, 11:48 AM IST

ABOUT THE AUTHOR

...view details