ಕರ್ನಾಟಕ

karnataka

ETV Bharat / state

ಆಹಾರ ಸಾಮಗ್ರಿ ನಡುವೆಯೇ ಮಲಗಿರುವ ಪುಟಾಣಿಗಳು: ಅಂಗನವಾಡಿ ಕೇಂದ್ರದ ದುಸ್ಥಿತಿ ನೋಡಿ - ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ಮಹದೇಶ್ವರ ನಗರ

ಚನ್ನಪಟ್ಟಣದ ಮಹದೇಶ್ವರ ನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿ ಇರುವ ಒಂದು ಚಿಕ್ಕ ಕೊಠಡಿಯಲ್ಲಿಯೇ ಆಹಾರ ಸಾಮಗ್ರಿಗಳ ಮಧ್ಯೆ ಮಕ್ಕಳನ್ನೂ ಸಾಲಾಗಿ ಕೂರಿಸಿ ಪಾಠ ಹೇಳಿಕೊಡಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ.

lack of amenities in Ramnagar Anganwadi center
ಆಹಾರ ಸಾಮಾಗ್ರಿಗಳ ನಡುವೆ ಮಲಗಿರುವ ಮಕ್ಕಳು

By

Published : Mar 16, 2022, 4:15 PM IST

ರಾಮನಗರ: ಚನ್ನಪಟ್ಟಣದ ಮಹದೇಶ್ವರ ನಗರದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಒಂದು ಚಿಕ್ಕ ಕೊಠಡಿಯಲ್ಲೇ ಆಹಾರ ಸಾಮಗ್ರಿ, ಕುರ್ಚಿ ಹಾಗೂ ಪಾತ್ರೆಗಳ ಮಧ್ಯೆ ಸಾಲಾಗಿ ಮಕ್ಕಳು ಮಲಗಿರುವ ದೃಶ್ಯ ಕಂಡುಬಂದಿದೆ.


ಆರು ವರ್ಷದಿಂದ ಬಾಡಿಗೆಗಿರುವ ಅಂಗನವಾಡಿ ಕೇಂದ್ರ ಇದಾಗಿದೆ. ಇಲ್ಲಿ ನಿತ್ಯ ಸುಮಾರು 20ಕ್ಕೂ ಹೆಚ್ಚು ಮಕ್ಕಳನ್ನು ಆರೈಕೆ ಮಾಡಲಾಗುತ್ತದೆ. ಅಂಗನವಾಡಿ ಶಿಕ್ಷಕಿ ಇರುವ ಒಂದು ಚಿಕ್ಕ ಕೊಠಡಿಯಲ್ಲಿಯೇ ಆಹಾರ ಸಾಮಗ್ರಿಗಳ ಮಧ್ಯೆಯೇ ಮಕ್ಕಳನ್ನ ಸಾಲಾಗಿ ಕೂರಿಸಿ ಪಾಠ ಹೇಳಿಕೊಡುತ್ತಿದ್ದಾರೆ.

ಸ್ವತಃ ಅಂಗನವಾಡಿ ಕೇಂದ್ರ ಇಲ್ಲದೇ ಅಧಿಕಾರಿಗಳು ಈ ಚಿಕ್ಕ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದಾರಂತೆ. ಒಟ್ಟು 34 ಮಕ್ಕಳಿರುವ ಅಂಗನವಾಡಿ ಕೇಂದ್ರ ಇದಾಗಿದ್ದು, ಪ್ರತಿ ತಿಂಗಳು ಗರ್ಭಿಣಿ, ಬಾಣಂತಿಯರಿಗೆ ಕೊಡುವ ಆಹಾರ ವಸ್ತುಗಳೂ ಕೂಡ ಇದೇ ಕೊಠಡಿಯಲ್ಲಿ ಶೇಖರಣೆಯಾಗಿದೆ.

ಇದನ್ನೂ ಓದಿ:ಯಾದಗಿರಿಯಲ್ಲಿ ಎರಡು ಕಡೆ ಎಸಿಬಿ ದಾಳಿ : 5 ಲಕ್ಷ ನಗದು, ಚಿನ್ನ ಹಾಗೂ ಬೆಳ್ಳಿ ವಶಕ್ಕೆ

For All Latest Updates

TAGGED:

ABOUT THE AUTHOR

...view details