ಕರ್ನಾಟಕ

karnataka

ಫೆಬ್ರವರಿ 10 ರೊಳಗೆ ಕೆಆರ್​ಪಿಪಿ ಪಕ್ಷದ ಅಭ್ಯರ್ಥಿಗಳ ಘೋಷಣೆ : ಗಾಲಿ ಜನಾರ್ದನ ರೆಡ್ಡಿ

By

Published : Jan 28, 2023, 8:25 AM IST

ಬಿರುಸುಗೊಂಡ ವಿಧಾನಸಭಾ ಚುನಾವಣೆ ತಯಾರಿ- ದೇವಸೂಗೂರು ಗ್ರಾಮದ ಶ್ರೀಸೂಗೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಜನಾರ್ದನ ರೆಡ್ಡಿ ಭೇಟಿ - ಶಂಶಲಾಂ ದರ್ಗಾಕ್ಕೆ ತೆರಳಿ ದರ್ಶನ ಪಡೆದುಕೊಂಡ ಮಾಜಿ ಸಚಿವ ಜನಾರ್ದನ ರೆಡ್ಡಿ - ಫೆಬ್ರವರಿ 10 ರೊಳಗೆ ಕೆಆರ್​ಪಿಪಿ ಪಕ್ಷದ ಅಭ್ಯರ್ಥಿಗಳ ಘೋಷಣೆ

janardhana
ಗಾಲಿ ಜನಾರ್ದನ ರೆಡ್ಡಿ

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಾಲಿ ಜನಾರ್ದನ ರೆಡ್ಡಿ

ರಾಯಚೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ತಯಾರಿ ಬಿರುಸುಗೊಂಡಿದೆ. ಈ ಬೆನ್ನಲ್ಲೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನಿನ್ನೆ ದೇವಾಲಯಗಳಿಗೆ ಭೇಟಿ ನೀಡಿದರು. ರಾಯಚೂರು ತಾಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ದೇವಸೂಗೂರು ಗ್ರಾಮದ ಶ್ರೀಸೂಗೂರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೇರವೇರಿಸಿದರು. ಬಳಿಕ ನಗರದಲ್ಲಿರುವ ಶಂಶಲಾಂ ದರ್ಗಾಕ್ಕೆ ತೆರಳಿ ದರ್ಶನ ಪಡೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಯಾರಿಗೂ ಹೆದರುವ ಅವಶ್ಯಕತೆಯಿಲ್ಲ. ನನ್ನ ಪಕ್ಷವನ್ನು ಸಂಘಟನೆ ಮಾಡುತ್ತೇನೆ. ಎಲ್ಲರನ್ನು ಕರೆದು ಕುರ್ಚಿ ಹಾಕಿ ಏನು ಮಾಡುತ್ತಿದ್ದೇನೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಮುಂಬರುವ ದಿನಗಳಲ್ಲಿ ರಾಯಚೂರು ಜಿಲ್ಲೆಯಲ್ಲೇ ಬೃಹತ್ ಕಾರ್ಯಕ್ರಮ ಮಾಡುತ್ತೇನೆ. 10 ದಿನಗಳ ಒಳಗೆ ಅನೇಕ ಮಂದಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. 30 ಕ್ಷೇತ್ರಗಳಲ್ಲಿ ಕೆಆರ್​ಪಿಪಿ ಪಕ್ಷ ಬಲಿಷ್ಠವಾಗಿ ಬೇರೂರಿದೆ. 13 ಕ್ಷೇತ್ರಗಳಲ್ಲಿ ಈಗಾಗಲೇ ಅಭ್ಯರ್ಥಿಗಳಿದ್ದಾರೆ. 17 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನ ಘೋಷಿಸುತ್ತೇವೆ. ಫೆಬ್ರವರಿ 10 ರ ಒಳಗೆ ನನ್ನ ಪಕ್ಷದ ಅಭ್ಯರ್ಥಿಗಳನ್ನ ಘೋಷಣೆ ಮಾಡುತ್ತೇನೆ" ಎಂದರು.

ಇನ್ನು "ಆಸ್ತಿ ಮುಟ್ಟುಗೋಲು ಮಾಡಿ ನನ್ನನ್ನು ಹೆದರಿಸಲು ಯಾರಿಂದಲೂ ಸಾಧ್ಯವಿಲ್ಲ. ಇದು ಯಾವುದನ್ನು ನಾನು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ, ನ್ಯಾಯಾಲಯಗಳಿವೆ. ಒಂದು ರೂಪಾಯಿ ಜಪ್ತಿ ಮಾಡಿದರೆ 10 ವರ್ಷದಲ್ಲಿ 10 ರೂಪಾಯಿಯಾಗಿ ಮರಳಿ ಬರುತ್ತದೆ" ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಅಭಿವೃದ್ಧಿ ವಿಚಾರಗಳನ್ನ ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತಿದ್ದೇನೆ. ಬೇರೆ ಪಕ್ಷಗಳ ವಿಚಾರಗಳ ಕುರಿತು ಸಾರ್ವಜನಿಕರಿಗೆ ತಿಳಿಸುತ್ತೇನೆ. 2023 ರಲ್ಲಿ ಸರ್ಕಾರ ರಚನೆ ಮಾಡುವ ಶಕ್ತಿಯನ್ನು ಭಗವಂತ ಕರುಣಿಸಲಿ ಎನ್ನುವುದಷ್ಟೇ ನನ್ನ ವಿಚಾರ ಎಂದರು.

ಇದನ್ನೂ ಓದಿ:ನಾನು ಬಸವಣ್ಣನ ತತ್ವದ ಮೇಲೆ ನಡೆಯುವವನು, ಒಮ್ಮೆ ಮುಂದಿಟ್ಟ ಹೆಜ್ಜೆ ಹಿಂದಿಡಲ್ಲ: ಜನಾರ್ದನ ರೆಡ್ಡಿ

ಸಹೋದರರು ಪಕ್ಷಕ್ಕೆ ಬರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಎಲ್ಲರೂ ಬರುತ್ತಾರೆ ಎಂದರು. ನಾನು ಯಾರನ್ನೋ ನಂಬಿಕೊಂಡು ಪಕ್ಷ ಕಟ್ಟಿಲ್ಲ, ಕುಟುಂಬದವರಿಗೆ ಕಾಯುವುದಿಲ್ಲ. ನನ್ನ ಪತ್ನಿ ಚುನಾವಣೆಗೆ ನಿಲ್ಲುವುದು ಖಚಿತ. ಯಾವ ಕ್ಷೇತ್ರ ಅನ್ನೋದನ್ನ ಮುಂದೆ ಘೋಷಣೆ ಮಾಡುತ್ತೇನೆ. ನನ್ನ ಮಗಳು ಸಕ್ರಿಯ ರಾಜಕೀಯಕ್ಕೆ ಬರುತ್ತಾಳೆ. ಆದರೆ ಈ ಬಾರಿ ಸ್ಪರ್ಧೆ ಮಾಡುವುದಿಲ್ಲ ಎಂದು ಜನಾರ್ದನ್ ರೆಡ್ಡಿ ಹೇಳಿದರು.

ಇದನ್ನೂ ಓದಿ:ರೆಡ್ಡಿಯ ಕೆಆರ್​ಪಿಪಿ ಪಕ್ಷಕ್ಕೆ ಜಿಲ್ಲಾಮಟ್ಟದ ಬಿಜೆಪಿ ಮುಖಂಡರು, ಕಾರ್ಯಕರ್ತರ ಸೇರ್ಪಡೆ

ಗಂಗಾವತಿ ಕ್ಷೇತ್ರದಿಂದ ಜಿ ಜನಾರ್ದನ ರೆಡ್ಡಿ ಸ್ಪರ್ಧೆ: ವಿಧಾನಸಭಾ ಚುನಾವಣೆ 2023ಕ್ಕೆ ಗಂಗಾವತಿ ಮತ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಣೆ ಮಾಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ, ರಾಜಕೀಯ ಧೃವೀಕರಣ ಪ್ರಾರಂಭಿಸಿದ್ದಾರೆ. ಹೊಸ ಪಕ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಬೇರೆ ಬೇರೆ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸೇರುತ್ತಿದ್ದಾರೆ.

ಇದನ್ನೂ ಓದಿ:40 ಕ್ಷೇತ್ರಕ್ಕೆ ಶೀಘ್ರ ಕೆಆರ್​ಪಿಪಿ ಅಭ್ಯರ್ಥಿಗಳು ಪ್ರಕಟ: ಜನಾರ್ದನ ರೆಡ್ಡಿ

ABOUT THE AUTHOR

...view details