ರಾಯಚೂರು:ಇಂದು ವಾಲ್ಮೀಕಿ ಜಯಂತಿ ಪ್ರಯುಕ್ತ ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸೇರಿ ವಿವಿಧ ಸಂಘ ಸಂಸ್ಥೆಗಳು ಐತಿಹಾಸಿಕ ಪುರಾತನ ಕಲ್ಯಾಣಿಯನ್ನು (ಬಾವಿ) ಸ್ವಚ್ಛಗೊಳಿಸಿದರು.
ವಾಲ್ಮೀಕಿ ಜಯಂತಿ ಪ್ರಯುಕ್ತ ಪಾಳು ಬಿದ್ದ ಕಲ್ಯಾಣಿ ಸ್ವಚ್ಛತೆ.. - ಐತಿಹಾಸಿಕ ಪುರಾತನ ಕಲ್ಯಾಣಿ
ವಾಲ್ಮೀಕಿ ಜಯಂತಿ ಪ್ರಯುಕ್ತ ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸೇರಿ ವಿವಿಧ ಸಂಘ ಸಂಸ್ಥೆಗಳು ಐತಿಹಾಸಿಕ ಪುರಾತನ ಕಲ್ಯಾಣಿಯನ್ನು(ಬಾವಿ)ಸ್ವಚ್ಛಗೊಳಿಸಿದರು.
ವಾಲ್ಮೀಕಿ ಭಾವಚಿತ್ರಕ್ಕೆ ಎಸ್ಪಿ ಸಿ ಬಿ ವೇದಮೂರ್ತಿ ಪುಷ್ಪನಮನ ಸಲ್ಲಿಸಿದರು. ರಾಜಯೋಗಿನಿ ಸ್ಮಿತಾ ಅಕ್ಕನವರು ಬಾವಿ ಸ್ವಚ್ಛತೆಗೆ ಚಾಲನೆ ನೀಡಿದರು. ಸಿ ಬಿ ವೇದಮೂರ್ತಿ ಅವರು ಮಾತನಾಡಿ, ಮಹಾತ್ಮರ ಜಯಂತಿ ಅಂಗವಾಗಿ ಪ್ರತಿಯೊಬ್ಬರು ಸಾಮೂಹಿಕ ಸೇವೆ ಕೈಗೊಳ್ಳುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಕರೆ ಕೊಟ್ಟರು.
ಗ್ರೀನ್ ರಾಯಚೂರು, ಗ್ರಾಮ ಪಂಚಾಯತ್ ಕುರ್ಡಿ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಧಾರವಾಡದ ವೃಕ್ಷ ಭಾರತ ಸೈನಿಕರು, ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಮದ ಸಂಘ ಸಂಸ್ಥೆಗಳು, ಸಾರ್ವಜನಿಕರು ಸೇರಿ 200ಮಂದಿ ಭಾಗವಹಿಸಿದ್ದರು. ಸತತ ಒಂದು ವಾರದಿಂದ ಸ್ವಚ್ಛತೆಯಲ್ಲಿ ತೊಡಗಿದ ಪಾಲಮ್ಮ ಗಂಡ ರಾಮಣ್ಣ ಮತ್ತು ಲಕ್ಷ್ಮಮ್ಮ ಗಂಡ ಹನುಮಪ್ಪ ನಾಯಕ ಅವರ ಎರಡು ಕುಟುಂಬಗಳಿಗೆ ಮನೆ ಬಳಕೆಗೆ ಬೇಕಾದ ಸಾಮಾಗ್ರಿಗಳನ್ನು ವಿತರಿಸಿದರು.