ಕರ್ನಾಟಕ

karnataka

ETV Bharat / state

ಅವೈಜ್ಞಾನಿಕ ರಸ್ತೆ, ಚರಂಡಿ ನಿರ್ಮಾಣ: ದೇವಸ್ಥಾನ, ಮನೆಗಳು ಜಲಾವೃತ - Unscientific road

ಲಿಂಗಸುಗೂರು ತಾಲೂಕು ಗುರುಗುಂಟಾ ಗ್ರಾಮದಲ್ಲಿ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಹಲವು ಯೋಜನೆಗಳಡಿ ಕೋಟ್ಯಂತರ ಹಣ ಖರ್ಚು ಮಾಡಲಾಗಿದೆ. ಆದರೆ, ಮೇಲುಸ್ತುವಾರಿ ಮತ್ತು ನಿರ್ವಹಣೆ ಸಮಸ್ಯೆ ಹಾಗೂ ಅವೈಜ್ಞಾನಿಕ ಕಾಮಗಾರಿಗಳ ಪರಿಣಾಮ ದೇವಸ್ಥಾನ ಹಾಗೂ ಮನೆಗಳಿಗೆ ಮಳೆ ನೀರು ಹೊಕ್ಕಿದೆ.

Unscientific road, sewer construction at raichur
ಜಲಾವೃತಗೊಂಡ ದೇವಸ್ಥಾನ

By

Published : Sep 10, 2020, 8:10 PM IST

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ಗುರುಗುಂಟಾ ಗ್ರಾಮದಲ್ಲಿ ಅವೈಜ್ಞಾನಿಕ ರಸ್ತೆ, ಚರಂಡಿ ನಿರ್ಮಾಣದ ಪರಿಣಾಮ ಬಹುತೇಕ ವಾರ್ಡ್​ಗಳಲ್ಲಿ ಮಳೆ ಮತ್ತು ಚರಂಡಿ ನೀರು ಹಾಗೂ ಘನತ್ಯಾಜ್ಯ ಸಂಗ್ರಹಗೊಂಡು ದುರ್ನಾತ ಬೀರುವಂತಾಗಿದೆ.

ಜಲಾವೃತಗೊಂಡ ದೇವಸ್ಥಾನ- ಮನೆಗಳು

ಗ್ರಾಮದ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಹಲವು ಯೋಜನೆಗಳಡಿ ಕೋಟ್ಯಂತರ ಹಣ ಖರ್ಚು ಮಾಡಲಾಗಿದೆ. ಆದರೆ, ಮೇಲುಸ್ತುವಾರಿ ಮತ್ತು ನಿರ್ವಹಣೆ ಸಮಸ್ಯೆ ಹಾಗೂ ಅವೈಜ್ಞಾನಿಕ ಕಾಮಗಾರಿಗಳಿಂದ ಬುಧವಾರ ರಾತ್ರಿ ಸುರಿದ ಮಳೆಗೆ ವೆಂಕಟೇಶ್ವರ ದೇವಸ್ಥಾನ ಸೇರಿ ಸುತ್ತಮುತ್ತಲ ಮನೆಗಳಿಗೆ ನೀರು ಹೊಕ್ಕು ಅಪಾರ ನಷ್ಟ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ABOUT THE AUTHOR

...view details