ರಾಯಚೂರು:ಕಾಲುವೆ ಕಡೆ ತೆರಳಿದ್ದ ಬಾಲಕರಿಬ್ಬರು ನೀರು ಪಾಲಾಗಿರುವ ಘಟನೆ ತಾಲೂಕಿನ ರಾಮರಾವ್ ಕ್ಯಾಂಪ್‌ನಲ್ಲಿ ನಡೆದಿದೆ.
ಪ್ರವೀಣ್ (8) ಎಂಬಾತನ ಮೃತದೇಹ ಪತ್ತೆಯಾಗಿದೆ. ಚಿನ್ನಿ ಎಂಬ ಬಾಲಕನ ಬಗ್ಗೆ ಸುಳಿವು ದೊರೆತಿಲ್ಲ. ಫೆ. 12 ರಂದು ಇಬ್ಬರು ಬಾಲಕರು ಶಾಲೆಗೆ ತೆರಳಿದ್ದರು. ಮಧ್ಯಾಹ್ನ ವೇಳೆ ಶಾಲೆಯಲ್ಲಿ ಬಿಟ್ಟು ಹೊರಗಡೆ ಹೋಗಿದ್ದಾರೆ. ಆಗ ಮನೆಯವರು ಶಾಲೆಯಲ್ಲಿ ಆಟವಾಡಲು ತೆರಳಿರಬಹುದೆಂದು ಸುಮ್ಮನಾಗಿದ್ದಾರೆ. ಆದ್ರೆ ಸಂಜೆ ವೇಳೆ ಇಬ್ಬರು ಮನೆಗೆ ಮರಳಿಲ್ಲ. ಇದರಿಂದ ಗಾಬರಿಗೊಂಡ ಪಾಲಕರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಹುಡಾಕಾಟ ನಡೆಸಿದ್ದಾರೆ. ಆದ್ರೆ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.