ರಾಯಚೂರು:ಹೈದರಾಬಾದ್-ರಾಯಚೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಯಚೂರು ಶಕ್ತಿನಗರದ ಆರ್ಟಿಪಿಎಸ್ ಕೇಂದ್ರದಲ್ಲಿ ಗಂಟೆಗಟ್ಟಲೆ ಸಂಚಾರ ಸಮಸ್ಯೆ ಉಂಟಾಗಿ ಜನರು ಪರದಾಡುವಂತಾಯಿತು.
ಆರ್ಟಿಪಿಎಸ್ ಬಳಿ ಹಾರು ಬೂದಿ ತೆರವು ಪ್ರಕ್ರಿಯೆಯಿಂದ ಟ್ರಾಫಿಕ್ ಸಮಸ್ಯೆ
ಆರ್ಟಿಪಿಎಸ್ ವಿದ್ಯುತ್ ಶಾಖೋತ್ಪನ್ನ ಘಟಕದಿಂದ ಹಾರೂ ಬೂದಿ ತೆಗೆಯುವ ಪ್ರಕ್ರಿಯೆಯಿಂದಾಗಿ ಸಂಚಾರದ ಸಮಸ್ಯೆ ಹೆಚ್ಚಾಗಿದೆ.
ಆರ್ಟಿಪಿಎಸ್ ಬಳಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ.
ಆರ್ಟಿಪಿಎಸ್ ವಿದ್ಯುತ್ ಶಾಖೋತ್ಪನ್ನ ಘಟಕದ ಹಾರು ಬೂದಿ ಖಾಲಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಹಾರು ಬೂದಿ ಕೊಂಡೊಯ್ಯಲು ರಾಜ್ಯದ ನಾನಾ ಜಿಲ್ಲೆಗಳಿಂದ ವಾಹನಗಳು ಆಗಮಿಸುತ್ತವೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳು ನಿಂತಿರುವುದರಿಂದ ನಿತ್ಯ ಸಂಚರಿಸುವ ಬಸ್ಗಳ ಸಂಚಾರದಲ್ಲಿ ತೊಂದರೆ ಉಂಟಾಗುತ್ತಿದೆ. ಇದರಿಂದಾಗಿ ಪ್ರಯಾಣಿಕರು ಟ್ರಾಫಿಕ್ ಪೊಲೀಸರನ್ನು ಶಪಿಸುತ್ತಿದ್ದಾರೆ.