ರಾಯಚೂರು :ವೈನ್ಸ್ ಶಾಪ್ ಕಿಡಕಿ ಮುರಿದು ಸಾವಿರಾರು ರೂಪಾಯಿ ಮೌಲ್ಯದ ಮದ್ಯದ ಬಾಟಲಿ ಹಾಗೂ ನಗದು ದೋಚಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಮದ್ಯದ ಅಂಗಡಿಗೆ ನುಗ್ಗಿದ ಖದೀಮರು .. ₹ 30 ಸಾವಿರದಷ್ಟು ಎಣ್ಣೆ, 13 ಸಾವಿರ ನಗದು ದೋಚಿ ಪರಾರಿ.. - ರಾಯಚೂರು.
ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ನರ್ತಕಿ ವೈನ್ಸ್ ಶಾಪ್‌ನಲ್ಲಿ ನಿನ್ನೆ ತಡರಾತ್ರಿ ಕಿಡಿಕಿ ಮುರಿದು, ಒಳನುಗ್ಗಿದ ಕಳ್ಳರು ಸುಮಾರು 30 ಸಾವಿರ ಮೌಲ್ಯದ ಮದ್ಯದ ಬಾಟಲಿಗಳು ಮತ್ತು ಕ್ಯಾಶ್ ಕೌಂಟರ್‌ನಲ್ಲಿದ 13 ಸಾವಿರ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಮದ್ಯದ ಅಂಗಡಿಯಲ್ಲಿ ಕಳ್ಳತನ
ಜಿಲ್ಲೆಯ ಸಿರವಾರ ಪಟ್ಟಣದ ನರ್ತಕಿ ವೈನ್ಸ್ ಶಾಪ್‌ನಲ್ಲಿ ನಿನ್ನೆ ತಡರಾತ್ರಿ ಕಿಡಿಕಿ ಮುರಿದು, ಒಳನುಗ್ಗಿದ ಕಳ್ಳರು ಸುಮಾರು 30 ಸಾವಿರ ರೂ. ಮೌಲ್ಯದಷ್ಟು ಮದ್ಯದ ಬಾಟಲಿಗಳು ಮತ್ತು ಕ್ಯಾಶ್ ಕೌಂಟರ್‌ನಲ್ಲಿದ 13 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ಕಳ್ಳತನಕ್ಕೂ ಮುನ್ನ ಮುಂಜಾಗ್ರತೆ ವಹಿಸಿದ ಖದೀಮರು ಮದ್ಯಂದಗಡಿಗೆ ನುಗುವ ಮೊದಲೇ ಸಿಸಿ ಕ್ಯಾಮರ್‌ದ ವೈರ್ ಕಟ್ ಮಾಡಿದ್ದು, ಸಿಸಿ ಕ್ಯಾಮರ್‌ದಲ್ಲಿ ಕಳ್ಳರ ಕೈ ಚಳಕ ಸೆರೆಯಾಗಿಲ್ಲ ಎಂದು ಮದ್ಯದಂಗಡಿ ಮಾಲೀಕರು ಹೇಳಿದ್ದಾರೆ.ಘಟನೆ ಸಂಬಂಧ ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.