ಕರ್ನಾಟಕ

karnataka

ETV Bharat / state

ಎರಡು ದಶಕ ಬತ್ತದ ಹಳ್ಳ, ರಣಬಿಸಿಲಿಗೆ ಖಾಲಿ, ಖಾಲಿ! - kannada news

ಎರಡು ದಶಕಗಳಿಂದ ಜನ, ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸುತ್ತಿದ್ದ ಹಳ್ಳ ಈ ಬಾರಿ ಖಾಲಿ ಆಗಿದೆ. ಈ ಮೂಲಕ ಜನರೂ ಸೇರಿ ಮೂಕ ಪ್ರಾಣಿಗಳು ಕಂಗಾಲಾಗಿವೆ.

ಬಿಸಿಲೂರಿನ 20 ವರ್ಷಗಳಿಂದ ಬತ್ತದ ಹಳ್ಳ, ಭೀಕರ ಬರಗಾಲಕ್ಕೆ ಖಾಲಿ

By

Published : Apr 12, 2019, 9:03 PM IST

ರಾಯಚೂರು : ಜಿಲ್ಲೆಯನ್ನು ಸತತವಾಗಿ ಕಾಡುತ್ತಿರುವ ಬರಗಾಲ ಕಳೆದ ಎರಡು ದಶಕಗಳಲ್ಲಿ ಬತ್ತದ ಹಳ್ಳವನ್ನು ಈ ಬಾರಿ ಖಾಲಿ ಮಾಡಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ-ಜಂಬಲದಿನ್ನಿ ಹಳ್ಳ ಯಾವುದೇ ಬರಗಾಲಕ್ಕೂ ಜಗ್ಗಿರಲಿಲ್ಲ. ಆದ್ರೆ, ಈ‌ ಬಾರಿ ಹಳ್ಳದಲ್ಲಿ ನೀರಿಲ್ಲ. ಪರಿಣಾಮ ಹಳ್ಳ ತನ್ನ ಮೂಲ ಸ್ವರೂಪ ಕಳೆದುಕೊಳ್ಳುತ್ತಿರುವ ಜೊತೆಗೆ ಜನ ಜಾನುವಾರುಗಳಿಗೆ ಜೀವಜಲದ ಸಮಸ್ಯೆ ಉದ್ಭವಿಸಿದೆ.

ಬಿಸಿಲೂರಿನ 20 ವರ್ಷಗಳಿಂದ ಬತ್ತದ ಹಳ್ಳ ಭೀಕರ ಬರಗಾಲಕ್ಕೆ ಖಾಲಿ ಆಗಿದೆ.

ಈ ಹಳ್ಳ ಗಲಗ, ಮುಂಡರಗಿ, ಹುಲಿಗುಡ್ಡ, ಪರಪುರ ಗ್ರಾಮಗಳ ಜನರಿಗೆ ನೀರು ಒದಗಿಸುತ್ತಿತ್ತು.ಭೀಕರ ಬರಗಾಲದ ಕಾರಣ ಕಳೆದ ಎರಡು ದಶಕಗಳಿಂದ ಬತ್ತದ ಅಮರಾಪುರ-ಜಂಬಲದಿನ್ನಿ ಹಳ್ಳ ಬತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.

ABOUT THE AUTHOR

...view details