ರಾಯಚೂರು: ನಗರದ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ಕಂಬವೇರಿದ ವ್ಯಕ್ತಿಯೋರ್ವ ಜೀವಂತವಾಗಿ ಸುಟ್ಟು ಕರಕಲಾದ ಭಯಾನಕ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ರೈಲ್ವೆ ವಿದ್ಯುತ್ ಕಂಬವೇರಿದ ವ್ಯಕ್ತಿ ಸಾವು.. ಮೊಬೈಲ್‌ನಲ್ಲಿ ದೃಶ್ಯ ಸೆರೆ - ರಾಯಚೂರು ರೈಲ್ವೇ ನಿಲ್ದಾಣ
ರಾಜ್ಯದಲ್ಲಿ ರೈಲುಗಳ ಸೇವೆ ಆರಂಭವಾಗಿದ್ದು, ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿರುವ ಪ್ರಯಾಣಿಕರು ರಾಯಚೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ವ್ಯಕ್ತಿಯೊಬ್ಬ ರೈಲ್ವೆ ವಿದ್ಯುತ್ ಕಂಬ ಹತ್ತಿ ಕೆಳಗೆ ಇಳಿಯುವಾಗ ವಿದ್ಯುತ್ ಪ್ರವಹಿಸಿ ಅಲ್ಲೇ ಸುಟ್ಟು ಕರಕಲಾಗಿದ್ದಾನೆ.
ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಸುಮಾರು 35 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಈತ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ಇಂದಿನಿಂದ ರೈಲುಗಳ ಸೇವೆ ಆರಂಭವಾಗಿದ್ದು, ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿರುವ ಪ್ರಯಾಣಿಕರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ವ್ಯಕ್ತಿ ವಿದ್ಯುತ್ ಪೋಲ್ ಏರಿದ್ದಾನೆ. ಆಗ ಇದನ್ನು ಕಂಡ ಜನರು ಕೆಳಗೆ ಇಳಿಯುವಂತೆ ಮನವೊಲಿಸಿದ್ದಾರೆ. ಕೆಳಗೆ ಇಳಿಯುವ ವೇಳೆ ವಿದ್ಯುತ್ ತಂತಿಗೆ ಕಾಲು ತಾಗಿ ಅಲ್ಲೇ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದು ರೈಲ್ವೆ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿದರು. ಅಗ್ನಿ ಶಾಮಕ ಸಿಬ್ಬಂದಿ ಬಂದು ಮೃತದೇಹವನ್ನು ಕೆಳಗಿಳಿಸಿದರು.