ಕರ್ನಾಟಕ

karnataka

ETV Bharat / state

ಗುರ್ಜಾಪುರ ಬ್ಯಾರೇಜ್ ಸಂಪೂರ್ಣ ಮುಳಗಡೆ: ಸ್ಥಳಕ್ಕೆ ಅಧಿಕಾರಿಗಳ ಭೇಟಿ - The complete of the Gurjapur Barrage update

ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮದ ಬಳಿ ನಿರ್ಮಾಣವಾಗಿರುವ ಗುರ್ಜಾಪುರ ಬ್ಯಾರೇಜ್ ಸಂಪೂರ್ಣ ಮುಳಗಡೆಯಾಗಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಗುರ್ಜಾಪುರ ಬ್ಯಾರೇಜ್ ಸಂಪೂರ್ಣ ಮುಳಗಡೆಯಾಗಿದೆ.

By

Published : Oct 24, 2019, 3:36 PM IST

ರಾಯಚೂರು:ನಾರಾಯಣಪುರ ಜಲಾಶಯದಿಂದ 3.69 ಲಕ್ಷ ಕ್ಯೂಸೆಕ್​​ ನೀರು ಹರಿಯ ಬಿಟ್ಟಿರುವುದರಿಂದ ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮದ ಬಳಿ ನಿರ್ಮಾಣವಾಗಿರುವ ಗುರ್ಜಾಪುರ ಬ್ಯಾರೇಜ್ ಸಂಪೂರ್ಣ ಮುಳಗಡೆಯಾಗಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಗುರ್ಜಾಪುರ ಬ್ಯಾರೇಜ್ ಸಂಪೂರ್ಣ ಮುಳಗಡೆಯಾಗಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಸೂಚನೆ ಮೆರೆಗೆ ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಜಿಲ್ಲಾ ಉಸ್ತುವರಿ ಕಾರ್ಯದರ್ಶಿ ಜಿ.ಕುಮಾರನಾಯಕ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್, ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಸೇರಿದಂತೆ ಅಧಿಕಾರಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಹಿಂದೆ ಕೃಷ್ಣಾ ನದಿಯಲ್ಲಿ 9 ಲಕ್ಷ ಕ್ಯೂಸೆಕ್​​​ಗೂ​​ ಹೆಚ್ಚು ನೀರು ಬಿಡಲಾಗಿತ್ತು. ಆಗ ಜಿಲ್ಲಾಡಳಿತ ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಿದೆ. ಈಗ 5 ಲಕ್ಷ ಕ್ಯೂಸೆಕ್​​​ ನೀರು ಬಿಡಲಾಗಿದೆ, ಈಗಿನ ಪ್ರವಾಹದಿಂದ ಅಗಿರುವ ಹಾನಿ ಸಮೀಕ್ಷೆ ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಚಿಂಚೋಡಿಯಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಸಂತೋಷ ಗೌಡ ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು.

ABOUT THE AUTHOR

...view details