ರಾಯಚೂರು: ಕೊರೊನಾ ಭೀತಿ ನಡುವೆ ರಾಜ್ಯದಲ್ಲಿ ಶಾಲಾ-ಕಾಲೇಜುಗಳನ್ನು ತೆರೆಯಲಾಗಿದ್ದು ಅಂತಿಮ ವರ್ಷದ ವಿದ್ಯಾರ್ಥಿಗಳ ತರಗತಿಗಳು ಸಹ ನಡೆದಿದೆ. ಆದರೆ, ನಗರದಲ್ಲಿ ಇದಕ್ಕೆ ಹಲವು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ನಿರುತ್ಸಾಹ ತೋರಿದ್ದಾರೆ.
ತರಗತಿಗಳು ಆರಂಭವಾಗಿ ನಾಲ್ಕೇ ನಾಲ್ಕು ದಿನ ಕಳೆದಿದೆ. ಆದರೆ, ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಲ್ಕನೇ ದಿನವಾದ ಇಂದು ಕೇವಲ ನಾಲ್ಕು ವಿದ್ಯಾರ್ಥಿಗಳು ಮಾತ್ರ ತರಗತಿಗತಿಗೆ ಹಾಜರಾಗುವ ಮೂಲಕ ನಿರುತ್ಸಾಹ ತೋರಿದ್ದಾರೆ.
ಬಿಎಸ್ಸಿ ಅಂತಿಮ ವರ್ಷದ ನಾಲ್ಕು ಜನ ವಿದ್ಯಾರ್ಥಿನಿಯರು ಕೋವಿಡ್-19 ಪರೀಕ್ಷೆ ಹಾಗೂ ಪಾಲಕರು ಒಪ್ಪಿಗೆ ಪತ್ರದೊಂದಿಗೆ ಕಾಲೇಜು ಹಾಜರಾಗಿದ್ದಾರೆ. ಕಾಲೇಜಿಗೆ ಬಂದಿರುವ ನಾಲ್ವರು ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರು ಪಾಠ ಸಹ ತೆಗೆದುಕೊಂಡರು.
ಕಾಲೇಜಿನಲ್ಲಿ ನಾನಾ ವಿಭಾಗದ ಒಟ್ಟು 1033 ಅಂತಿಮ ವರ್ಷದ ವಿದ್ಯಾರ್ಥಿಗಳಿದ್ದಾರೆ. ಮೊದಲ ಎರಡು ದಿನ (ದಿ.17 ರಿಂದ) ಓರ್ವ ವಿದ್ಯಾರ್ಥಿನಿ ಬಂದರೆ, ಇತ್ತೀಚೆಗೆ ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಬಂದು ಹೋಗುತ್ತಿದ್ದಾರೆ. ಇಂದು ಮಾತ್ರ ಕೇವಲ 4 ವಿದ್ಯಾರ್ಥಿಗಳು ಹಾಜರಾಗಿದ್ದು ಕಂಡು ಬಂತು. ಕೋವಿಡ್ ಭೀತಿಯಿಂದ ಉಳಿದ ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲು ಹತ್ತಲು ಹಿಂದೇಟು ಹಾಕುತ್ತಿದ್ದಾರೆ.
ಕೇವಲ ನಾಲ್ಕು ವಿದ್ಯಾರ್ಥಿಗಳಿಗೆ ಪಾಠ ಮಾಡಿದ ಗುರುವೃಂದ ಮತ್ತೊಂದೆಡೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿದ್ದರಿಂದ ಹಲವು ವಿದ್ಯಾರ್ಥಿಗಳಲ್ಲಿ ಭಯ ಕೂಡ ಶುರುವಾಗಿದೆ. ಹಾಗಾಗಿ ನಾನಾ ಕಾರಣಗಳಿಂದ ವಿದ್ಯಾರ್ಥಿಗಳನ್ನು ಕಾಲೇಜಿಗೆ ಕಳಿಸಲು ಪೋಷಕರು ಹಿಂದು-ಮುಂದು ನೋಡುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಕಾಲೇಜಿನಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅವರ ಆಗಮನಕ್ಕಾಗಿಯೇ ನಮ್ಮ ಕಾಲೇಜಿಲ್ಲಿ ಒಟ್ಟು 26 ಜನ ಪ್ರಾಧ್ಯಾಪಕರು ಕಾಯುತ್ತಿದ್ದಾರೆ ಅಂತಾರೆ ಪ್ರಿನ್ಸಿಪಾಲ್ ಮಲ್ಲನಗೌಡ.