ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ಕಸದ ರಾಶಿಯಲ್ಲಿ ಸಿಕ್ತು ನಿವೃತ್ತ ಎಎಸ್​ಐ ಮೃತದೇಹ: ಮಗನೇ ಹಂತಕ! - ರಾಯಚೂರಿನಲ್ಲಿ ನಿವೃತ್ತ ಎಎಸ್​ಐ ಕೊಲೆ

ಮದುವೆ ವಿಚಾರಕ್ಕೆ ಮಗನೊಬ್ಬ ತಂದೆಯನ್ನು ಕೊಲೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

Son killed to father in Raichur, Retired ASI murder in Raichur, Raichur crime news, ರಾಯಚೂರಿನಲ್ಲಿ ತಂದೆಯನ್ನೇ ಕೊಲೆ ಮಾಡಿದ ಮಗ, ರಾಯಚೂರಿನಲ್ಲಿ ನಿವೃತ್ತ ಎಎಸ್​ಐ ಕೊಲೆ, ರಾಯಚೂರು ಅಪರಾಧ ಸುದ್ದಿ,
ಮದುವೆ ವಿಚಾರಕ್ಕೆ ತಂದೆಯನ್ನೇ ಕೊಂದ ಮಗ!

By

Published : Feb 10, 2022, 12:32 PM IST

ರಾಯಚೂರು:ಮದುವೆ ವಿಚಾರಕ್ಕೆ ವಯಸ್ಸಾದ ತಂದೆಯನ್ನು ಮಗ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ನಗರದ ಗಂಜ್ ಸರ್ಕಲ್ ಹತ್ತಿರವಿರುವ ಗೋ ಶಾಲೆಯ ಹಿಂದುಗಡೆ ಕಸದ ರಾಶಿಯ ಮಧ್ಯೆ ನಿವೃತ್ತ ಎಎಸ್​ಐ ಕೊಲೆಯಾಗಿ ಪತ್ತೆಯಾಗಿರುವ ಘಟನೆ ನಿನ್ನೆ ನಡೆದಿದೆ.

ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಎಎಸ್ಐ ಬಸವರಾಜಪ್ಪ(75) ಪುತ್ರ ಜಗದೀಶ್​ನಿಂದಲೇ ಹತ್ಯೆಯಾಗಿದ್ದಾರೆ. ಸರ್ಕಾರಿ ಕೆಲಸದಿಂದ ನಿವೃತ್ತರಾದ ಬಳಿಕ ಬಸವರಾಜಪ್ಪ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ವಾಸಿಸುತ್ತಿದ್ದರು. ಕೆಲ ದಿನಗಳ ಹಿಂದೆ ರಾಯಚೂರಿನಲ್ಲಿ ತನ್ನ ಸಂಬಂಧಿಕರ ಮನೆಗೆ ಬಂದಿದ್ದರು. ನಿನ್ನೆ ದಿನ ಗೋ ಶಾಲೆಯ ಹಿಂದುಗಡೆ ಮದುವೆ ವಿಚಾರಕ್ಕೆ ತಂದೆ ಮಗನ ನಡುವೆ ಕಲಹ ಉಂಟಾಗಿದೆ.

ಇದನ್ನೂ ಓದಿ:ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ: ಎನ್‌ಐಎ ತನಿಖೆಗೆ ಆಗ್ರಹಿಸಿದ ಅಣ್ಣಾಮಲೈ

ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ಜಗಳ ವಿಕೋಪಕ್ಕೆ ತಿರುಗಿದೆ. ಪರಿಣಾಮ, ಜಗದೀಶ್​ ಸಿಮೆಂಟ್ ಉಂಡಿಯಿಂದ ಬಸವರಾಜಪ್ಪರ ತಲೆಗೆ ಬಲವಾಗಿ ಹೊಡೆದು ಗಾಯಗೊಳಿಸಿದ್ದಾನೆ. ಇದರಿಂದ ತೀವ್ರವಾಗಿ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ವಿಷಯ ತಿಳಿದು ಸ್ಥಳಕ್ಕೆ ಮಾರ್ಕೆಟ್ ಯಾರ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಘಟನೆ ಬಗ್ಗೆ ಅನುಮಾನಗೊಂಡ ಪೊಲೀಸರು ಮೃತದೇಹವನ್ನು ರಿಮ್ಸ್ ಶವಾಗಾರಕ್ಕೆ ರವಾನಿಸಿ ತನಿಖೆ ಆರಂಭಿಸಿದ್ದರು.

ತನಿಖೆಯ ವೇಳೆ ಮಗನೇ ತಂದೆಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹತ್ಯೆ ಮಾಡಿದ ಮಗ ಜಗದೀಶ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು, ಮೊದಲಿಗೆ ವಿವಾಹದ ವಿಚಾರವಾಗಿ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ಬಸವರಾಜಪ್ಪನ ಹಿರಿಯ ಪುತ್ರ ಶಿವರಾಜ್ ದೂರು ದಾಖಲಿಸಿದ್ದು, ಪೊಲೀಸರು ಮಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details