ಕರ್ನಾಟಕ

karnataka

ETV Bharat / state

ಬಿ ವೈ ವಿಜಯೇಂದ್ರ ಅಂದ್ರೆ ದುಡ್ಡು, ಹಣ ಕೊಟ್ಟು ವೋಟ್ ತಗೋತೀವಿ ಅನ್ನೋ ಅಹಂ.. ಸಿದ್ದರಾಮಯ್ಯ ಆರೋಪ - ಪ್ರತಾಪ್ ಗೌಡ

ನಮ್ಮ ಕಾಂಗ್ರೆಸ್ ಅಭ್ಯರ್ಥಿ‌ಯಲ್ಲಿ ದುಡ್ಡು ಇಲ್ಲ. ಆದ್ರೆ ಜನರ ವಿಶ್ವಾಸ, ಪ್ರೀತಿಯನ್ನ ಗಳಿಸಿದ್ದಾನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಬಿಜೆಪಿಯವರು ರೈತ ವಿರೋಧಿ ಕಾನೂನುಗಳನ್ನ ತಂದಿದ್ದಾರೆ. ರೈತರ ಕಷ್ಟಕ್ಕೆ ಬೆಲೆ ಕೊಟ್ಟಿಲ್ಲ. ರಾಜ್ಯದಲ್ಲಿ ಸಂಬಳ ಕೊಡಲು ದುಡ್ಡಿಲ್ಲ. ಸಂಬಳ, ಪಿಂಚಣಿಗೆ 21 ಸಾವಿರ ಕೋಟಿ ಸಾಲ ತಗೋತಿದ್ದಾರೆ. ರಾಜ್ಯ ಉಳಿಯಬೇಕಾದರೆ ಬಿಜೆಪಿ ತೊಲಗಬೇಕು..

Siddaramaiah
ಸಿದ್ದರಾಮಯ್ಯ

By

Published : Mar 29, 2021, 5:59 PM IST

ರಾಯಚೂರು :ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅಂದ್ರೆ ಹಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮಸ್ಕಿ ಉಪಚುನಾವಣೆ ನಿಮಿತ್ತ ಕಾಂಗ್ರೆಸ್ ಅಭ್ಯರ್ಥಿ ಪರ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿ ವೈ ವಿಜಯೇಂದ್ರ ಅಂದ್ರೆ ದುಡ್ಡು. ದುಡ್ಡು ಕೊಟ್ಟು ವೋಟ್ ತಗೋತೀವಿ ಅನ್ನೋ ಅಹಂ ಬಿಜೆಪಿಯವರಿಗೆ ಬಂದಿದೆ. ನಮ್ಮ ಕಾಂಗ್ರೆಸ್ ಅಭ್ಯರ್ಥಿ‌ಯಲ್ಲಿ ದುಡ್ಡು ಇಲ್ಲ. ಆದ್ರೆ, ಜನರ ವಿಶ್ವಾಸ, ಪ್ರೀತಿಯನ್ನ ಗಳಿಸಿದ್ದಾನೆ ಎಂದರು.

ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ..

ಮಾಜಿ ಶಾಸಕ ಪ್ರತಾಪ್‌ಗೌಡ ಪಾಟೀಲ್ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ‌ವೆಸಗಿ, ಎರಡು ಬಾರಿ ಶಾಸಕನನ್ನಾಗಿ ಮಾಡಿದ ಪಕ್ಷಕ್ಕೆ ಚೂರಿ ಹಾಕಿ ಹೋಗಿದ್ದಾರೆ. ಬಿಜೆಪಿಗೆ 25 ರಿಂದ 30 ಕೋಟಿ ಹಣಕ್ಕೆ ಮಾರಾಟವಾಗಿದ್ದಾನೆ ಎಂದು ಲೇವಡಿ‌ ಮಾಡಿದರು.

ಆಪರೇಷನ್ ಕಮಲ ಮಾಡುವ ಬಿ ಎಸ್ ಯಡಿಯೂರಪ್ಪ ಹಿಂಬಾಗಿಲಿನಿಂದ ಸಿಎಂ ಆಗಿದ್ದಾರೆ. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ 7 ಕೆಜಿ ನೀಡಲಾಗುತ್ತಿತ್ತು. ಆದ್ರೆ‌, ಬಿಜೆಪಿ ಅಧಿಕಾರಕ್ಕೆ ಬಂದ್ಮೇಲೆ 4 ಕೆಜಿ ಇಳಿಸಿದ್ದಾರೆ.

ಸರ್ಕಾರದ ಹಣ, ಸಾರ್ವಜನಿಕ ಹಣದಲ್ಲಿ 7 ಕೆಜಿ ಕೊಡಲು ಇವರಿಗೆ ಏನು. 2023ರಲ್ಲಿ ಬರುವ ಸಾರ್ವತ್ರಿಕ ಚುನಾವಣೆಯಲ್ಲಿ 150 ಸ್ಥಾನ ಗೆದ್ದು ನಾವು ಅಧಿಕಾರಕ್ಕೆ ಬರುತ್ತೇವೆ. ನಾವು ಅಧಿಕಾರಕ್ಕೆ ಬಂದ ಮೇಲೆ 10 ಕೆಜಿ ಅಕ್ಕಿ ನೀಡುವ ಮೂಲಕ, ಇಂದಿರಾ ಕ್ಯಾಂಟೀನ್ ಮುಂದುವರೆಸುತ್ತೇವೆ ಎಂದರು.

ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಬಂದ ಮೇಲೆ ಒಂದು ರೂ. ಸಾಲ ಮನ್ನಾ ಮಾಡಲಿಲ್ಲ. ದೇಶದಲ್ಲಿ ಅತೀ ಹೆಚ್ಚು ಸುಳ್ಳು ಹೇಳುವ ಮುಖ್ಯಮಂತ್ರಿ ಯಡಿಯೂರಪ್ಪ. ಪ್ರತಾಪ್ ಗೌಡನಂತ ದ್ರೋಹಿ. ನೀಚರಾಜಕಾರಣ ಮಾಡುವವರು ರಾಜಕೀಯದಲ್ಲಿ ಉಳಿಯಬಾರದು. ಹಣಕ್ಕೆ ತಮ್ಮನ್ನ ತಾವೇ ಮಾರಿಕೊಳ್ಳುವ ಅವರ ಠೇವಣಿ ಸಹ ಜಪ್ತಿಯಾಗಬೇಕು.

ಬಿಜೆಪಿಯವರು ರೈತ ವಿರೋಧಿ ಕಾನೂನುಗಳನ್ನ ತಂದಿದ್ದಾರೆ. ರೈತರ ಕಷ್ಟಕ್ಕೆ ಬೆಲೆ ಕೊಟ್ಟಿಲ್ಲ. ರಾಜ್ಯದಲ್ಲಿ ಸಂಬಳ ಕೊಡಲು ದುಡ್ಡಿಲ್ಲ. ಸಂಬಳ, ಪಿಂಚಣಿಗೆ 21 ಸಾವಿರ ಕೋಟಿ ಸಾಲ ತಗೋತಿದ್ದಾರೆ. ರಾಜ್ಯ ಉಳಿಯಬೇಕಾದರೆ ಬಿಜೆಪಿ ತೊಲಗಬೇಕು ಎಂದರು.

ABOUT THE AUTHOR

...view details