ರಾಯಚೂರು : ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಆರ್.ವೆಂಕಟೇಶ್ ಕುಮಾರ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ರಾಯಚೂರು ನೂತನ ಜಿಲ್ಲಾಧಿಕಾರಿಯಾಗಿ ಆರ್.ವೆಂಕಟೇಶ್‌ಕುಮಾರ್ ಅಧಿಕಾರ ಸ್ವೀಕಾರ.. - ರಾಯಚೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿ
ರಾಯಚೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಆಗಿ ಆರ್.ವೆಂಕಟೇಶ್ ಕುಮಾರ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಹಲವು ದಿನಗಳಿಂದ ಜಿಲ್ಲಾಧಿಕಾರಿ ಹುದ್ದೆ ಖಾಲಿಯಾಗಿತ್ತು. ನಿನ್ನೆ ಸರ್ಕಾರ ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದ ಆರ್.ವೆಂಟಕೇಶ ಕುಮಾರ್ ಅವರನ್ನ ರಾಯಚೂರು ಡಿಸಿಯಾಗಿ ನೇಮಿಸಿದೆ.
ಆರ್.ವೆಂಕಟೇಶ್ ಕುಮಾರ್
ಹಲವು ದಿನಗಳಿಂದ ಜಿಲ್ಲಾಧಿಕಾರಿ ಹುದ್ದೆ ಖಾಲಿಯಾಗಿತ್ತು. ನಿನ್ನೆ ಸರ್ಕಾರ ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದ ಆರ್.ವೆಂಟಕೇಶ ಕುಮಾರ್ ಅವರನ್ನ ರಾಯಚೂರು ಡಿಸಿಯಾಗಿ ನೇಮಿಸಿದೆ. ಆಡಳಿತ ಮತ್ತು ಸಿಬ್ಬಂದಿ ಇಲಾಖೆಯ ಕಾರ್ಯದರ್ಶಿ ಜಿಲ್ಲಾಧಿಕಾರಿಯನ್ನ ನಿಯೋಜಿಸಿ ಆದೇಶ ಹೊರಡಿಸಿದ್ದರು.
ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಶರತ್.ಬಿ ಅವರನ್ನ ಕಲಬುರ್ಗಿ ಜಿಲ್ಲೆಗೆ ವರ್ಗಾವಣೆ ಮಾಡಿತ್ತು. ಕಲಬುರ್ಗಿ ಜಿಲ್ಲಾಧಿಕಾರಿಯಾಗಿದ್ದ ಆರ್.ವೆಂಕಟೇಶ ಕುಮಾರವರಿಗೆ ಈವರೆಗೂ ಸ್ಥಳ ನಿಯೋಜಿಸಿರಲಿಲ್ಲ, ಆದರೀಗ ರಾಯಚೂರು ಜಿಲ್ಲೆಗೆ ನಿಯೋಜನೆ ಮಾಡಲಾಗಿದೆ.