ಕರ್ನಾಟಕ

karnataka

ETV Bharat / state

ತಗ್ಗಿದ ನೆರೆ: ತಿಂಗಳ ಬಳಿಕ ಅಥಣಿ-ಜಮಖಂಡಿ ರಸ್ತೆ ಸಂಚಾರಕ್ಕೆ ಮುಕ್ತ - ಕೊಯ್ನಾ ಜಲಾಶಯ

ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಹರಿಯುವ ನೀರಿನ ಪ್ರಮಾಣ ತಗ್ಗಿದ್ದು, ಒಂದು ತಿಂಗಳಿನಿಂದ ಸಂಪರ್ಕ ಕಳೆದುಕೊಂಡ ಬಾಗಲಕೋಟೆ ಜಮಖಂಡಿ ರಸ್ತೆ ಸಂಚಾರ ಮುಕ್ತವಾಗಿದೆ.

ಅಥಣ ತಾಲೂಕಿನಿಂದ ಬಾಗಲಕೋಟೆಗೆ ಸಂಪರ್ಕ ಕಲ್ಪಿಸುವ ಮಾರ್ಗ

By

Published : Sep 15, 2019, 2:43 PM IST

ಅಥಣಿ: ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಹರಿಯುವ ಕೃಷ್ಣ ನದಿ ನೀರಿನ ಪ್ರಮಾಣ ತಗ್ಗಿದ್ದು, ಅಥಣಿ ತಾಲೂಕಿನಿಂದ ಬಾಗಲಕೋಟೆಯ ಜಮಖಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಮುಕ್ತವಾಗಿದೆ.

ಅಥಣ ತಾಲೂಕಿನಿಂದ ಬಾಗಲಕೋಟೆಗೆ ಸಂಪರ್ಕ ಕಲ್ಪಿಸುವ ಮಾರ್ಗ

ಮಹಾರಾಷ್ಟ್ರದಿಂದ ವೇದಗಂಗಾ, ದೂಧಗಂಗಾ ಮತ್ತು ಕೃಷ್ಣಾ ನದಿಗಳಿಗೆ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ನೆರೆಯಿಂದ ತತ್ತರಿಸಿದ ಈ ಭಾಗದ ಜನತೆ ಈಗ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.

ಝುಂಜರವಾಡ ಗ್ರಾಮದಿಂದ ತುಬಚಿ ಮಾರ್ಗವಾಗಿ ಬಾಗಲಕೋಟೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಮಾರು ಒಂದು ತಿಂಗಳ ನಂತರ ಸಂಚಾರಕ್ಕೆ ಮುಕ್ತವಾಗಿದೆ.

ABOUT THE AUTHOR

...view details