ರಾಯಚೂರು :ನಗರದ ತೀನ್ ಖಂದಿಲ್, ಏಕ್ ಮಿನಾರ್, ಮಹಾವೀರ್, ಚಂದ್ರಮೌಳೇಶ್ವರ ಬಳಿಯ ವ್ಯಾಪಾರ ಮಳಿಗೆ ಹಾಗೂ ಫುಟ್ಪಾತ್ ಬಳಿಯಲ್ಲಿ ರಂಜಾನ್ ಹಬ್ಬಕ್ಕೆ ಖರೀದಿ ಭರಾಟೆ ಜೋರಾಗಿತ್ತು.
ಬರ ಇದ್ರೇನಾಯ್ತು.. ರಂಜಾನ್ ಹಬ್ಬದ ಖರೀದಿ ಭರಾಟೆ ಜೋರಾಗೈಯ್ತಿ.. - etv bharat
ರಾಯಚೂರು ನಗರದ ತೀನ್ ಖಂದಿಲ್, ಏಕ್ ಮಿನಾರ್, ಮಹಾವೀರ್, ಚಂದ್ರಮೌಳೇಶ್ವರ ಬಳಿಯ ವ್ಯಾಪಾರ ಮಳಿಗೆ ಹಾಗೂ ಫುಟ್ಪಾತ್ ಬಳಿಯಲ್ಲಿ ರಂಜಾನ್ ಹಬ್ಬಕ್ಕೆ ಖರೀದಿ ಭರಾಟೆ ಜೋರಾಗಿದೆ.
ಬರದ ನಡುವೆಯೂ ನಡೆಯಿತು ಭರಾಟೆ ರಂಜಾನ್ ಖರೀದಿ
ನಾಳೆ ರಂಜಾನ್ ಹಬ್ಬವಿದ್ದು ಮುಸ್ಲಿಂ ಬಾಂಧವರು ಹಬ್ಬಕ್ಕೆ ಬೇಕಾದ ಸಾಮಾನುಗಳನ್ನು ಖರೀದಿಸಲು ಮುಗಿಬಿದ್ರು. ಹಬ್ಬಕ್ಕೆ ಬೇಕಾದ ಬಟ್ಟೆ, ಟೋಪಿ, ಚಪ್ಪಲಿ, ಮಹಿಳೆಯರ ಬಳೆ, ಬುರ್ಖಾ, ಬ್ಯಾಗ್ ಸೇರಿದಂತೆ ಇತರೆ ಸ್ಟೇಷನರಿ ವಸ್ತುಗಳನ್ನ ಖರೀದಿಸಲು ಮುಂದಾಗಿದ್ದರು.
ಅಲ್ಲದೇ ಹಬ್ಬಕ್ಕೆ ತಯಾರಿಸುವ ವಿಶೇಷ ಖಾದ್ಯ ಸೀರ್ ಖುರ್ಮಾ( ದೂದ್ ಖುರ್ಮಾ)ಕ್ಕೆ ಸ್ಯಾವಗಿ(ಸೇಮ್ಯಾ), ಕಾಜು ಬಾದಾಮ್ ಹಾಗೂ ಇತರೆ ಡ್ರೈಫ್ರುಟ್ಸ್ ಖರೀದಿ ಕೂಡ ಜೋರಾಗಿಯೇ ನಡೆಯಿತು.