ರಾಯಚೂರು :ಮಸ್ಕಿ ಪಟ್ಟಣದ ಹೊರವಲಯದಲ್ಲಿ ಸಾನಬಾಳ ಕ್ರಾಸ್ನಲ್ಲಿ ನಡೆದಿದ್ದ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿಯೋರ್ವ ಸೋಮವಾರ ಶವವಾಗಿ ಪತ್ತೆಯಾಗಿದ್ದಾನೆ. ಆರೋಪಿ ರಮೇಶ ಎಂಬಾತನ ಮೃತನಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ಫೆ.25ರಂದು ರಮೇಶ್ ತಾನು ಮನಸಾರೆ ಪ್ರೀತಿಸುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿ ಭೂಮಿಕಾಳನ್ನು ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಮಸ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ, ಇದೀಗ 33 ದಿನಗಳ ನಂತರ ತಾನು ಪ್ರೀತಿಸಿದ ಗೆಳತಿಯನ್ನು ಕೊಲೆ ಮಾಡಿದ ಸ್ಥಳದ ಸನಿಹದಲ್ಲಿ ರಮೇಶನ ಮೃತದೇಹ ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಭೂಮಿಕಾ ಹಾಗೂ ರಮೇಶ ಇಬ್ಬರೂ ಸಂಬಂಧಿಕರು ಆಗಿದ್ದರು. ರಮೇಶಗೆ ವರಸೆಯಲ್ಲಿ ಭೂಮಿಕಾ ಅತ್ತೆಯ ಮಗಳು ಆಗಿದ್ದಳು. ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಸುತ್ತಾಟ, ಓಡಾಟ ಸಹ ಮಾಡಿದ್ದಾರೆ. ಮುಂದೆ ಈಕೆಯನ್ನು ಮದುವೆ ಮಾಡಿಕೊಳ್ಳುವುದಿಲ್ಲ ಮತ್ತು ಭೂಮಿಕಾ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ ಎನ್ನಲಾಗುತ್ತಿದೆ.