ಕರ್ನಾಟಕ

karnataka

ETV Bharat / state

ತುರುವಿಹಾಳ ಮಹಿಳೆ ಮೇಲೆ ಗ್ಯಾಂಗ್​ ರೇಪ್​ ಪ್ರಕರಣ: ದೂರು ದಾಖಲಾದ ಮೂರು ಗಂಟೆಗಳಲ್ಲೇ ಕಾಮುಕರು ಅರೆಸ್ಟ್​ - Sindhanoor of Raichur

ಏಪ್ರಿಲ್ 12ರಂದು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಮೂವರು ಕಾಮುಕರನ್ನು ತುರುವಿಹಾಳ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

raichur: Gang rape accused are arrested
ರಾಯಚೂರು: ಸಾಮೂಹಿಕ ಬಲತ್ಕಾರವೆಸಗಿದ ಕಾಮುಕರು ಪೊಲೀಸರ ವಶ

By

Published : May 20, 2020, 6:35 PM IST

Updated : May 20, 2020, 7:05 PM IST

ರಾಯಚೂರು:ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ತುರುವಿಹಾಳ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಸಿಂಧನೂರು ತಾಲೂಕು ತುರುವಿಹಾಳ ಪಟ್ಟಣದ ಆದೇಶ, ಸೋಮನಾಥ, ರಮೇಶ್​ ಬಂಧಿತರು. ಏಪ್ರಿಲ್ 12ರಂದು ಮಹಿಳೆಯ ಮೇಲೆ ಈ ಮೂವರು ಅತ್ಯಾಚಾರವೆಸಗಿದ್ದರು. ಮಹಿಳೆಯು ಬರ್ಹಿದೆಸೆಗೆ ಹೋಗಿ ವಾಪಸ್​ ಮನೆಗೆ ಹಿಂತಿರುಗುತ್ತಿದ್ದಾಗ ಮಾರ್ಗದಲ್ಲಿ ಸಿಕ್ಕಿದ ಪರಿಚಿತ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಳು. ಆಗ ಅಲ್ಲಿಗೆ ಬಂದ ಈ ಮೂವರು ಕಾಮುಕರು ನೀವಿಬ್ಬರು ಅನೈತಿಕ ಸಂಬಂಧ ಹೊಂದಿದ್ದೀರಿ. ಈ ವಿಚಾರವನ್ನು ಊರಲ್ಲಿ ಎಲ್ಲರಿಗೂ ಹೇಳಿ ಮಾನ ಕಳೆಯುತ್ತೇವೆ ಎಂದು ಬೆದರಿಸಿದ್ದರು.

ಆನಂತರ ಮಹಿಳೆಯೊಂದಿಗೆ ಮಾತನಾಡುತ್ತಾ ನಿಂತಿದ್ದ ವ್ಯಕ್ತಿಯನ್ನ ಅಲ್ಲಿಂದ ಓಡಿಸಿ, ಪಟ್ಟಣದ ಹಳ್ಳದ ಬಳಿ ಮಹಿಳೆಯನ್ನು ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅಷ್ಟೇ ಅಲ್ಲದೆ, ಅತ್ಯಾಚಾರವೆಸಗಿದ ಬಳಿಕ ಈ ವಿಷಯವನ್ನು ಯಾರಿಗೂ ಹೇಳಬಾರದೆಂದು ಜೀವ ಬೆದರಿಕೆ ಹಾಕಿದ್ದರು.

ಘಟನೆಯಿಂದ ಹೆದರಿದ್ದ ಮಹಿಳೆ ಈ ವಿಚಾರವನ್ನು ಎಲ್ಲೂ ಬಾಯ್ಬಿಟ್ಟಿರಲಿಲ್ಲ. ಆದರೆ, ಇದಾದ ಬಳಿಕ ದುರುಳರು ಮೇ.14ರಂದು ಆಕೆಯನ್ನು ಮತ್ತೆ ಹಳ್ಳದ ಕಡೆ ಬರುವಂತೆ ಒತ್ತಾಯಿಸಿದ್ದರು. ಇದರಿಂದ ನೊಂದ ಮಹಿಳೆ ತುರುವಿಹಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ಕುರಿತು ತಕ್ಷಣ ತಂಡ ರಚಿಸಿದ ಪೊಲೀಸರು, ದೂರು ದಾಖಲಾದ 3 ಗಂಟೆಯೊಳಗೆ ಆರೋಪಿಗಳನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Last Updated : May 20, 2020, 7:05 PM IST

ABOUT THE AUTHOR

...view details