ಕರ್ನಾಟಕ

karnataka

ETV Bharat / state

ಬೆಳೆಗೆ ಮಾರಕವಾದ ಕಳೆ ತೆಗೆಯೋದ್ಹೇಗೆ.. ರಾಯಚೂರು ಕೃಷಿ ವಿವಿಯ ನಿರ್ದೇಶಕರಿಂದ ಸಲಹೆಗಳಿವೆ..

ಈಗಾಗಲೇ ಕೆಲ ರೈತರು ಬಿತ್ತನೆ ಮಾಡಿದ್ರೆ, ಇನ್ನೂ ಕೆಲವರು ಬಿತ್ತನೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ರೈತರಿಗೆ ಬಿತ್ತನೆ ಬಳಿಕ ಎದುರಾಗುವುದು ಕಳೆ ಸಮಸ್ಯೆ. ಇದನ್ನ ಬಿತ್ತನೆ ಬಳಿಕ ಕಾಲ ಕಾಲಕ್ಕೆ ಔಷಧಿ ಸಿಂಪಡಿಸುವ ಮೂಲಕ ಕಳೆ ಸಮಸ್ಯೆ ದೂರವಾಗಿಸಿಕೊಳ್ಳಬೇಕಾಗಿದೆ.

raichur-farmers-facing-weed-problem-in-craps
ಬೆಳೆಗೆ ಮಾರಕವಾಗಿರೋ ಕಳೆ ತೆಗೆಯುವುದೇಗೆ; ರಾಯಚೂರು ಕೃಷಿ ವಿವಿಯ ನಿರ್ದೇಶಕರ ಸಲಹೆಗಳಿವು

By

Published : Jun 17, 2020, 8:16 PM IST

ರಾಯಚೂರು: ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ರೈತ ವಲಯದಲ್ಲಿ ಆಶಾದಾಯಕ ಮೂಡಿಸಿದೆ. ನಿರೀಕ್ಷೆಯಂತೆ ಮಳೆ ಸುರಿಯುವ ಆಶಾಭಾವನೆಯಿಂದ ರೈತರು ಹೊಲ-ಗದ್ದೆಗಳನ್ನ ಸ್ವಚ್ಛಗೊಳಿಸಿ ಬಿತ್ತನೆಗಾಗಿ ಬೀಜಗಳನ್ನ ಖರೀದಿಸಲು ಕೃಷಿ ವಿಶ್ವವಿದ್ಯಾಲಯಗಳು, ರೈತ ಸಂಪರ್ಕ ಕೇಂದ್ರಗಳಲ್ಲಿ ಖರೀದಿ ಮುಗಿ ಬಿದ್ದಿದ್ದಾರೆ.

ಬೆಳೆಗೆ ಮಾರಕವಾಗಿರೋ ಕಳೆ ತೆಗೆಯುವುದ್ಹೇಗೆ.. ರಾಯಚೂರು ಕೃಷಿ ವಿವಿಯ ನಿರ್ದೇಶಕರ ಸಲಹೆಗಳಿವು

ಈಗಾಗಲೇ ಕೆಲ ರೈತರು ಬಿತ್ತನೆ ಮಾಡಿದ್ರೆ, ಇನ್ನೂ ಕೆಲವರು ಬಿತ್ತನೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ರೈತರಿಗೆ ಬಿತ್ತನೆ ಬಳಿಕ ಎದುರಾಗುವುದು ಕಳೆ ಸಮಸ್ಯೆ. ಇದನ್ನ ಬಿತ್ತನೆ ಬಳಿಕ ಕಾಲ ಕಾಲಕ್ಕೆ ಔಷಧಿ ಸಿಂಪಡಿಸುವ ಮೂಲಕ ಕಳೆ ಸಮಸ್ಯೆ ದೂರವಾಗಿಸಿಕೊಳ್ಳಬೇಕಾಗಿದೆ.

ರೈತರು ತಮ್ಮ ಹೊಲದಲ್ಲಿ ಸೂಕ್ತವೆನಿಸುವ ಬೆಳೆ ಬೆಳೆಯಲು ಸಿದ್ಧರಿದ್ದಾರೆ. ಜಿಲ್ಲೆಯಲ್ಲಿ ಪ್ರಮುಖವಾಗಿ ತೊಗರಿ, ಹತ್ತಿ, ಭತ್ತ, ಸೂರ್ಯಕಾಂತಿ, ಸಜ್ಜೆ ಪೈಕಿ ತಮ್ಮ ಹೊಲಕ್ಕೆ ಸೂಕ್ತ ಬೆಳೆಯನ್ನ ಬೆಳೆಯುತ್ತಾರೆ. ಬಿತ್ತನೆಯ 25 ದಿನಗಳ ಬಳಿಕ ರೈತನಿಗೆ ಕಳೆ ಸಮಸ್ಯೆ ತಲೆದೂರುತ್ತೆ. ಇದಕ್ಕೆ ಪ್ರಮುಖವಾಗಿ ಬಿತ್ತನೆ ಸಮಯದಲ್ಲಿ ನಿಗದಿಯಂತೆ ರಸಗೊಬ್ಬರ ಬಳಕೆ ಮಾಡಬೇಕು. ಆದರೆ, ರೈತರು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿ ರಸಗೊಬ್ಬರ ಬಳಕೆಯಿಂದ ಹೊಲದಲ್ಲಿ ಕಳೆ ಅಧಿಕವಾಗಿ ಬೆಳೆಯುತ್ತದೆ.

ಕಳೆ ಬರುವ ಸಮಯದಲ್ಲಿ ಸೂಕ್ತ ಔಷಧಿಯನ್ನ ಸಿಂಪಡಿಸಬೇಕು. ಒಂದು ವೇಳೆ ಬೇರೆ ಯಾವುದಾದರೂ ಔಷಧಿ ಸಿಂಪಡನೆ ಮಾಡಿದಲ್ಲಿ ಬೆಳೆ ಹಾನಿ ಸಂಭವಿಸುತ್ತಿದೆ. ಕಳೆ ನಾಶಕ ಸಿಂಪಡನೆ ವೇಳೆ ರೈತರು ಕೃಷಿ ತಜ್ಞರು, ಕೃಷಿ ಅಧಿಕಾರಿಗಳು, ಕೃಷಿ ವಿಶ್ವವಿದ್ಯಾಲಯದ ತಜ್ಞರನ್ನ ಭೇಟಿ ಮಾಡಿ ಮಾಹಿತಿ ಪಡೆದುಕೊಳ್ಳಬೇಕು. ಆಗ ಮಾತ್ರ ಕಳೆಯ ಸಮಸ್ಯೆ ತಗ್ಗಿಸಿಕೊಳ್ಳಬಹುದು ಎಂದು ರಾಯಚೂರು ಕೃಷಿ ವಿವಿಯ ಸಹ ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಎ ಎಸ್ .ಚನ್ನಬಸವಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಹೊಲದಲ್ಲಿ ಕಳೆ ಅಧಿಕವಾಗಿ ಬೆಳೆದ್ರೆ ಇಳುವರಿಗೆ ಕಡಿಮೆಯಾಗುತ್ತದೆ. ಇದರಿಂದ ರೈತರ ನಿರೀಕ್ಷೆಯಂತೆ ಫಸಲು ದೊರೆಯುವುದಿಲ್ಲ. ಅಲ್ಲದೇ ಹಿಂದಿನ ದಿನಮಾನಗಳಲ್ಲಿ ಕೃಷಿ ಕೆಲಸಕ್ಕೆ ಕಾರ್ಮಿಕರ ಕೊರತೆಯಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಕೃಷಿ ಕೆಲಸಕ್ಕೆ ಕೂಲಿ ಕಾರ್ಮಿಕರು ಸಿಗುವುದು ದೊಡ್ಡ ತಲೆ ನೋವಾಗಿದೆ.

ಹೀಗಾಗಿ ರೈತರು ಬಿತ್ತನೆ ಬಳಿಕ ಕಾಲ ಕಾಲಕ್ಕೆ ಕೃಷಿ ತಜ್ಞರು, ಕೃಷಿ ಅಧಿಕಾರಿಗಳ ಮಾಹಿತಿ ಪಡೆದುಕೊಳ್ಳಬೇಕು. ನಿಗದಿತ ಪ್ರಮಾಣದಲ್ಲಿ ರಸಗೊಬ್ಬರ ಬಳಕೆ ಮಾಡಿ ಆಯಾ ಬೆಳೆಗಳ ಕಳೆಯನ್ನ ದೂರ ಮಾಡುವ ಕಳೆ ನಾಶಕ ಔಷಧಿ ಸಿಂಪಡಣೆ ಮಾಡಿ ಬೆಳೆಯನ್ನ ಉಪಯೋಗಿಸಿಕೊಳ್ಳಬೇಕು ಅನ್ನೋದು ಕೃಷಿ ತಜ್ಞರ ಅಭಿಪ್ರಾಯ. ರೈತರು ಕಳೆಯ ಸಮಸ್ಯೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡಾ.ಚನ್ನಬಸವಣ್ಣರವರ 9480696346 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

ABOUT THE AUTHOR

...view details