ರಾಯಚೂರು: ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ರೂಬಿ ಇಂದು ಮೃತಪಟ್ಟಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
18 ಪ್ರಕರಣ ಭೇದಿಸಿದ್ದ ಆಕೆ ಇನ್ನಿಲ್ಲ... ಯಾರು ಈ ರೂಬಿ? ಈಕೆಯ ಸಾಹಸ ಏನು?
ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ ಶ್ವಾನ ರೂಬಿ ಇಂದು ಮೃತಪಟ್ಟಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಕಳೆದ 13 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಪೊಲೀಸರಿಗೆ ಸಹಕಾರಿಯಾಗಿ ರೂಬಿ(ಶ್ವಾನ) ಕಾರ್ಯ ನಿರ್ವಹಿಸಿತ್ತು. ಆದ್ರೆ ಬೆಳಗಿನ ಜಾವ ಮೃತಪಟ್ಟಿದೆ. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಗೌರವ ವಂದನೆ ಸಲ್ಲಿಸಿ, ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ರೂಭಿಯ ಅಂತ್ಯ ಸಂಸ್ಕಾರ ಮಾಡಲಾಯಿತು.
ಶವಸಂಸ್ಕಾರದ ಬಳಿಕ ಅದರ ನೆನಪಿಗಾಗಿ ಗಿಡವನ್ನ ನೆಡಲಾಯಿತು. ರೂಬಿ 246 ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ತನಿಖೆಗೆ ಸಹಾಯ ಮಾಡಿದ್ದು, 18 ಪ್ರಕರಣಗಳನ್ನ ಭೇದಿಸುವಲ್ಲಿ ಯಶ್ವಸಿಯಾಗಿದೆ. ಪ್ರಮುಖವಾಗಿ ಮಾನವಿಯಲ್ಲಿ ಅಂಬೇಡ್ಕರ್ ಪುತ್ಥಳಿಕೆಗೆ ಅಪಮಾನವೆಸಗಿದ ಆರೋಪಿಗಳನ್ನ ಸೆರೆ, ಶಕ್ತಿ ನಗರದಲ್ಲಿನ ಇಂಜಿನಿಯರ್ ಹತ್ಯೆ ಪ್ರಕರಣದ ಹಂತಕರ ಸೆರೆ ಹಿಡಿಯುವ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದು, ಇಂದು ರೂಬಿ ಸಾವನ್ನಪ್ಪಿರುವುದು ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಎಸ್ ಪಿ ಯವರು ಡಾ.ಸಿ.ಬಿ.ವೇದಮೂರ್ತಿ ವಿಷಾದ ವ್ಯಕ್ತಪಡಿಸಿದರು.