ಕರ್ನಾಟಕ

karnataka

ETV Bharat / state

ರಾಯಚೂರು ಕೃಷಿ ವಿವಿಗೆ ಘನಮಠ ಶಿವಯೋಗಿಗಳ ಹೆಸರಿಡುವಂತೆ ಒತ್ತಾಯ

ಸಂತೆಕಲ್ಲೂರಿನ ಶ್ರೀಮಠದ ಪೀಠಾಧಿಪತಿ ಶ್ರೀಘನಮಠ ಶಿವಯೋಗಿಗಳು ಕೃಷಿ ಬಗೆಗಿನ ಹೆಚ್ಚಿನ ಆಸ್ತಕಿಯಿಂದ ಕೃಷಿ ಪದ್ಧತಿ ಕುರಿತು “ಕೃಷಿ ಜ್ಞಾನ ಪ್ರದೀಪಿಕೆ” ಎನ್ನುವ ಗ್ರಂಥ ರಚನೆ ಮಾಡಿದ್ದಾರೆ. ಗ್ರಂಥದ ಆಧಾರದ ಮೇಲೆ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿವೆ.

raichur-agri-vv-
ರಾಯಚೂರು ಕೃಷಿ ವಿವಿ

By

Published : Feb 24, 2021, 8:49 PM IST

ರಾಯಚೂರು: ಕಲ್ಯಾಣ-ಕರ್ನಾಟಕ (ಹೈದರಾಬಾದ್-ಕರ್ನಾಟಕ) ಪ್ರದೇಶ ರೈತರ ಅನುಕೂಲಕ್ಕೆ ರಾಯಚೂರು ಕೃಷಿ ವಿಶ್ವವಿದ್ಯಾಲವನ್ನು 2009ರಲ್ಲಿ ಸ್ಥಾಪಿಸಲಾಯಿತು. ಈ ಕೃಷಿ ವಿವಿ ಸ್ಥಾಪನೆಗೊಂಡು ಹಲವು ವರ್ಷಗಳು ಉರುಳಿದ್ದು, ರಾಯಚೂರು ಕೃಷಿ ವಿವಿಗೆ ಕೃಷಿ ಕ್ಷೇತ್ರದಲ್ಲಿ ಕೃಷಿ-ಋಷಿ ಎಂದೇ ಖ್ಯಾತಿ ಪಡೆದಿರುವ ಘನವೈರಾಗ್ಯ ಚಕ್ರವರ್ತಿ ಹೆಸರು ನಾಮಕಾರಣ ಮಾಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ರಾಯಚೂರು ಕೃಷಿ ವಿವಿ

ರಾಜ್ಯದಲ್ಲಿ ಹಿಂದುಳಿದ ಪ್ರದೇಶ ಕಲ್ಯಾಣ-ಕರ್ನಾಟಕ ಪ್ರದೇಶವೆಂದು ಬಿಂಬಿತವಾಗಿದೆ. ಈ ಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಜೊತೆಗೆ ಈ ಭಾಗದ ರೈತರ ಅನುಕೂಲಕ್ಕೆ ಕೃಷಿ ವಿವಿ ಸ್ಥಾಪನೆ ಮಾಡಬೇಕು ಎನ್ನುವ ಬೇಡಿಕೆ ಬಹುದಿನಗಳಿಂದ ಇತ್ತು. ಹೀಗಾಗಿ 2009ರಲ್ಲಿ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ರಾಯಚೂರು ಕೃಷಿ ವಿವಿ ಘೋಷಣೆ ಮಾಡುವ ಮೂಲಕ ಕಲ್ಯಾಣ ಕರ್ನಾಟಕ ಜನರ ಬೇಡಿಕೆಗೆ ಸ್ಪಂದಿಸಿತ್ತು.

ಇದಾದ ಬಳಿಕ ಕೃಷಿ ವಿವಿ ತನ್ನ ಕಾರ್ಯ ಆರಂಭಿಸಿದ್ದು, ಯಶ್ವಸಿಯಾಗಿ ಮುನ್ನಡೆಯುತ್ತಿದೆ. ಈ ವಿವಿಗೆ ಕೃಷಿ-ಋಷಿ ಎಂದೇ ಖ್ಯಾತ ನಾಮವಾಗಿರುವ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರಿನ ಘನವೈರಾಗ್ಯ ಚಕ್ರವರ್ತಿ ಶ್ರೀಘನಮಠ ಶಿವಯೋಗಿಗಳ ಹೆಸರು ನಾಮಕರಣ ಮಾಡುವಂತೆ ಹಲವು ದಿನಗಳಿಂದ ಒತ್ತಾಯ ಕೇಳಿ ಬರುತ್ತಿದೆ. ಆದರೆ ಇದುವರೆಗೆ ಹೆಸರು ನಾಮಕಾರಣ ಮಾಡಿಲ್ಲ.

ಸಂತೆಕಲ್ಲೂರಿನ ಶ್ರೀಮಠದ ಪೀಠಾಧಿಪತಿ ಶ್ರೀಘನಮಠ ಶಿವಯೋಗಿಗಳು ಕೃಷಿ ಬಗೆಗಿನ ಹೆಚ್ಚಿನ ಆಸ್ತಕಿಯಿಂದ ಕೃಷಿ ಪದ್ಧತಿ ಕುರಿತು “ಕೃಷಿ ಜ್ಞಾನ ಪ್ರದೀಪಿಕೆ” ಎನ್ನುವ ಗ್ರಂಥ ರಚನೆ ಮಾಡಿದ್ದಾರೆ. ಗ್ರಂಥದ ಆಧಾರದ ಮೇಲೆ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿವೆ.

ಒಟ್ಟು 23 ಅಧ್ಯಾಯಗಳು ಒಳಗೊಂಡಿರುವ ಈ ಗ್ರಂಥದಲ್ಲಿ 1ರಿಂದ 8ರವರೆಗೆ ಮಳೆಯಾಶ್ರಿತ ಬೇಸಾಯ, 9ರಿಂದ 18ರವರೆಗೆ ನೀರಾವರಿ, ಜಾನುವಾರು, ಸಾವಯವ, ನೈಸರ್ಗಿಕ ಮತ್ತು ಮಣ್ಣು ನೀರು ಸಂರಕ್ಷಣೆ, 19ರಿಂದ 23ರವರೆಗೆ ನಿರ್ಮಲತ್ವ, ಸದಾಚಾರ, ಸುಜ್ಞಾನಸರ, ಸದ್ಭಕ್ತಿ, ಅಂತರಂಗ, ಬಹಿರಂಗ ಕೃಷಿ ಕುರಿತು ಸವಿಸ್ತಾರವಾಗಿ ಗ್ರಂಥ ರಚನೆ ಮಾಡಿದ್ದು, ಕೃಷಿ ವಿಜ್ಞಾನಿಗಳಿಗೆ ತಿಳಿಯದ ವಿಷಯಗಳು ಇದರಲ್ಲಿ ಅಡಕವಾಗಿವೆ. ಇಂತಹ ಗ್ರಂಥ ರಚಿಸಿ, ಕೃಷಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಈ ಭಾಗದ ಘನಮಠ ಶಿವಯೋಗಿಗಳ ಹೆಸರು ಇಡಬೇಕು ಎಂದು ಮಠದ ಭಕ್ತರು ಒತ್ತಾಯಿಸಿದ್ದಾರೆ.

ಇಷ್ಟೊಂದು ಅಪಾರ ಕೂಡುಗೆ ನೀಡಿದ ಶ್ರೀಘನಮಠ ಶಿವಯೋಗಿಗಳ “ಕೃಷಿ ಜ್ಞಾನ ಪ್ರದೀಪಿಕೆ” ಗ್ರಂಥದ ಚಿನ್ಹೆಯನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಲಾಂಛನಕ್ಕೆ ಬಳಸಿಕೊಳ್ಳಲಾಗಿದೆ. ಅಲ್ಲದೇ ಇದೇ ಭಾಗಕ್ಕೆ ಕೃಷಿ ಪದ್ಧತಿಯನ್ನ ಪರಿಚಯಿಸಿದ ಸಂತೆಕಲ್ಲೂರಿನ ಶ್ರೀಘನಮಠ ಶಿವಯೋಗಿಗಳ ಹೆಸರು ಅಜರಾಮರವಾಗಿ ಉಳಿಯಲು ಇಲ್ಲಿನ ಜನರು ರಾಯಚೂರು ಕೃಷಿ ವಿವಿ ಆರಂಭದಿಂದಲೂ ಸಂತೆಕಲ್ಲೂರಿನ ಶ್ರೀಗಳ ಹೆಸರು ಇಡುವಂತೆ ಹಲವು ಬಾರಿ ಒತ್ತಾಯಿಸಿದ್ದಾರೆ.

ABOUT THE AUTHOR

...view details