ಕರ್ನಾಟಕ

karnataka

ETV Bharat / state

ಪಿಎಸ್​ಐನಿಂದ ಪಿಎಫ್ಐ ಕಾರ್ಯಕರ್ತರಿಗೆ ಥಳಿತ, ಗನ್ ಪಾಯಿಂಟ್ ಹಿಡಿದು ಜೀವಬೆದರಿಕೆ ಆರೋಪ!

ದೇವದುರ್ಗ ಪಟ್ಟಣದಲ್ಲಿ ಇತ್ತೀಚೆಗೆ ಬಿಜೆಪಿ ಪೌರತ್ವ ತಿದ್ದುಪಡಿ ವಿಧೇಯಕವನ್ನ ಬೆಂಬಲಿಸಿ ಜನಜಾಗೃತಿ ಕಾರ್ಯಕ್ರಮ ನಡೆಸುತ್ತಿರುವ ವೇಳೆ ಪೌರತ್ವ ತಿದ್ದುಪಡಿ ವಿರೋಧಿಸಿ ಕೆಲ ಯುವಕರು ಕಪ್ಪು ಬಾವುಟ ಹಿಡಿದು ಕಾಯಿದೆ ವಿರೋಧ ವ್ಯಕ್ತಪಡಿಸಿದವರನ್ನು ಪಿಎಸ್​​ಐ ಎಲ್.ಬಿ.ಅಗ್ನಿ ಬಂಧಿಸಿ, ಠಾಣೆಗೆ ಕರೆದು ಹೊಯ್ಯುದು ಹಿಗ್ಗಾಮುಗ್ಗಾ ಥಳಿಸಿ, ಅವಾಚ ಶಬ್ದಗಳಿಂದ ನಿಂದನೆ ಎಂದು ಆರೋಪಿಸಲಾಗಿದೆ.

psi-agni-hits-ppi-activist-and-showed-gun-point-to-them
psi-agni-hits-ppi-activist-and-showed-gun-point-to-them

By

Published : Jan 23, 2020, 5:28 PM IST

ರಾಯಚೂರು: ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಕ್ಕೆ ದೇವದುರ್ಗ ಠಾಣೆ ಪಿಎಸ್​​ಐ ಠಾಣೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಮುಖಂಡರು ಪಿಎಸ್​​ಐ ವಿರುದ್ದ ಆರೋಪಿಸಿದ್ದಾರೆ.

ಪಿಎಸ್​ಐನಿಂದ ಪಿಪಿಐ ಕಾರ್ಯಕರ್ತರಿಗೆ ಥಳಿತ ಮತ್ತು ಗನ್ ಪಾಯಿಂಟ್ ಹಿಡಿದು ಜೀವಬೆದರಿಕೆ ಆರೋಪ

ದೇವದುರ್ಗ ಪಟ್ಟಣದಲ್ಲಿ ಇತ್ತೀಚೆಗೆ ಬಿಜೆಪಿ ಪೌರತ್ವ ತಿದ್ದುಪಡಿ ವಿಧೇಯಕವನ್ನ ಬೆಂಬಲಿಸಿ ಜನಜಾಗೃತಿ ಕಾರ್ಯಕ್ರಮ ನಡೆಸುತ್ತಿರುವ ವೇಳೆ ಪೌರತ್ವ ತಿದ್ದುಪಡಿ ವಿರೋಧಿಸಿ ಕೆಲ ಯುವಕರು ಕಪ್ಪು ಬಾವುಟ ಹಿಡಿದು ಕಾಯಿದೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ದೇವದುರ್ಗ ಪಿಎಸ್​​ಐ ಎಲ್.ಬಿ.ಅಗ್ನಿ ಹಾಗೂ ಪೊಲೀಸ್ ಸಿಬ್ಬಂದಿಗಳು ಬಂಧಿಸಿ, ಠಾಣೆಗೆ ಕರೆದು ಹೊಯ್ಯುದು ಹಿಗ್ಗಾಮುಗ್ಗಾ ಥಳಿಸಿ, ಅವಾಚ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ದೇವದುರ್ಗ ಪಿಎಸ್​​ಐ ಎಲ್.ಬಿ.ಅಗ್ನಿ ಗನ್ ಪಾಯಿಂಟ್ ಹಿಡಿದು ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ. ಪೊಲೀಸ್​ರ ಥಳಿತಕ್ಕೆ ಒಳಗಾದ ಯುವಕರು ಸುಮಾರ 10 ಜನ ಯುವಕರು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಂತಿಯುತವಾಗಿ ವಿರೋಧ ವ್ಯಕ್ತಪಡಿಸಿದ ಯುವಕರನ್ನ ಬಂಧಿಸಿ, ಹಲ್ಲೆ ಮಾಡಿದ ಪಿಎಸ್​ಐ ಹಾಗೂ ಸಿಬ್ಬಂದಿಯನ್ನ ಈ ಕೂಡಲೇ ವಜಾಗೊಳಿಸಬೇಕು. ಇಲ್ಲದಿದ್ದಾರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಈ ಪ್ರಕರಣ ಕುರಿತಾಗಿ ರಾಯಚೂರು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ದೂರವಾಣಿ ಮೂಲಕ ಸಂಪರ್ಕಿಸಿದಾಗ, ಘಟನೆ ಸಂಬಂಧಿಸಿದ್ದಂತೆ ಪಿಎಸ್​​ಐ ವಿರುದ್ದ ದೂರು ನೀಡಲಾಗಿದೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ABOUT THE AUTHOR

...view details