ರಾಯಚೂರು:ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿಸಿಎಂ ಗೋವಿಂದ ಕಾರಜೋಳ ಗರಂ ಆದ ಪ್ರಸಂಗ ನಡೆಯಿತು.
ದಲಿತರಿಗೆ ಸ್ಮಶಾನ ಭೂಮಿ ವಿಚಾರ: ಅಧಿಕಾರಿಗಳ ವಿರುದ್ಧ ಡಿಸಿಎಂ ಕಾರಜೋಳ ಗರಂ
ಸ್ಮಶಾನ ಭೂಮಿ ಒದಗಿಸುವ ವಿಚಾರಕ್ಕೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದೆ ಇರುವುದು, ಅಧಿಕಾರಿಯ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸುವ ಮೂಲಕ ಅಧಿಕಾರಿಗಳ ವಿರುದ್ಧ ಕಾರಜೋಳ ಗರಂ ಆಗಿದ್ದರು.
ಸ್ಮಶಾನ ಭೂಮಿ ಒದಗಿಸುವ ವಿಚಾರಕ್ಕೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದೆ ಇರುವುದು, ಅಧಿಕಾರಿಯ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸುವ ಮೂಲಕ ಅಧಿಕಾರಿಗಳ ವಿರುದ್ಧ ಕಾರಜೋಳ ಗರಂ ಆಗಿದ್ದರು.
ಈ ವೇಳೆ ಮಾತನಾಡಿದ ಡಿಸಿಎಂ ಕಾರಜೋಳ, ಒಂದು ಹೊತ್ತಿನ ಊಟ ಮಾಡದೆ ಇರಬಹುದು. ಆದರೆ ಸತ್ತವರಿಗೆ ಮಸಣದ ಜಾಗವಿಲ್ಲದಿದ್ದರೆ ಹೇಗೆ ನಡೆಯುತ್ತೆ ಎಂದು ಅಧಿಕಾರಗಳ ಮೇಲೆ ಗರಂ ಆದರು. ಸಮಾಜ ಕಲ್ಯಾಣ ಕಾರ್ಯದರ್ಶಿಗೆ ಕರೆ ಮಾಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದಲಿತರಿಗೆ ನೀಡಿರುವ ಸ್ಮಶಾನ ಜಾಗದ ಬಗ್ಗೆ ಮಾಹಿತಿ ಪಡೆಯಿರಿ. ಅಲ್ಲದೆ ಕೂಡಲೇ ಮಾಹಿತಿ ನೀಡುವಂತೆ ಖಡಕ್ ಸೂಚನೆ ನೀಡಿದರು. ಸಮರ್ಪಕ ಮಾಹಿತಿ ನೀಡದಿದ್ದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.