ರಾಯಚೂರು:ನಕಲಿ ಸಾಧು ವೇಷಧಾರಿ ವ್ಯಕ್ತಿಯೊಬ್ಬ ಗೃಹಿಣಿಯ ಚಿನ್ನಾಭರಣ, ನಗದು ಕದ್ದು ಪರಾರಿಯಾಗಿದ್ದ. ಇದೀಗ ಆರೋಪಿ ರೇಖಾಚಿತ್ರವನ್ನ ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದೆ.
ನಕಲಿ ಸಾಧು ಬಂಧನಕ್ಕೆ ರೇಖಾ ಚಿತ್ರ ಬಿಡುಗಡೆ - ನಕಲಿ ಸಾಧುವೇಷಧಾರಿ
ನಕಲಿ ಸಾಧು ವೇಷಧಾರಿ ವ್ಯಕ್ತಿಯೊಬ್ಬ ರಾಯಚೂರು ನಗರದ ಮಕ್ತಲ್ ಪೇಟೆ ನಿವಾಸಿಗೆ ವಂಚಿಸಿ ಬಂಗಾರ, ಹಣ ದೋಚಿಕೊಂಡು ಹೋದ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯ ರೇಖಾಚಿತ್ರವನ್ನು ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆಗೊಳಿಸಿ ಬಂಧನಕ್ಕೆ ಬಲೆ ಬೀಸಿದೆ.
ಆರೋಪಿ ರೇಖಾ ಚಿತ್ರ ಬಿಡುಗಡೆ
ನಗರದ ಮಕ್ತಲ್ ಪೇಟೆ ನಿವಾಸಿಗೆ, ನಿಮ್ಮ ಪತಿಗೆ ಗಂಡಾಂತರವಿದೆ. ಪೂಜೆ ಮಾಡಬೇಕೆಂದು ಮನೆಯೊಳಗೆ ಹೋಗಿ, ಪೂಜೆ ನೆಪದಲ್ಲಿ 30 ಗ್ರಾಮ ಬಂಗಾರ, ₹ 10 ಸಾವಿರ ನಗದು ಪಡೆದು ಪರಾರಿಯಾಗಿದ್ದ.
ಈ ಕುರಿತು ನೇತಾಜಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈಗ ಪೊಲೀಸರು ನಕಲಿ ಸಾಧು ವೇಷದ ಆರೋಪಿಯ ರೇಖಾ ಚಿತ್ರವನ್ನ ಬಿಡುಗಡೆ ಮಾಡಿದ್ದು, ಆರೋಪಿ ಕಂಡುಬಂದಲ್ಲಿ, ಕೂಡಲೇ ಸ್ಥಳೀಯ ಠಾಣೆಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಕೋರಿದ್ದಾರೆ.