ಲಿಂಗಸುಗೂರು(ರಾಯಚೂರು): ಲಿಂಗಸುಗೂರಲ್ಲಿ ಹಿಂದುಸ್ಥಾನ್ ಯುನಿಲಿವರ್ ಲಿಮಿಟೆಡ್ ಕಂಪನಿಯ ಉತ್ಪಾದನೆಗಳ ಹಂಚಿಕೆಯಲ್ಲಿ ಏಜೆಂಟರು ತಾರತಮ್ಯ ಮಾಡುತ್ತಿರುವುದನ್ನು ವಿರೋಧಿಸಿ ವರ್ತಕರು ಪ್ರತಿಭಟನೆ ನಡೆಸಿದರು.
ಭಾರತ ಲಾಕ್ಡೌನ್ ಪರಿಸ್ಥಿತಿಯ ಲಾಭ ಪಡೆಯಲು ತಮಗೆ ಬೇಕಾದ ವರ್ತಕರಿಗೆ ಹೆಚ್ಚುವರಿ ಹಣ ಪಡೆದು ಅವರಿಗೆ ಬೇಕಾದಷ್ಟು ವಸ್ತುಗಳನ್ನು ನೀಡುತ್ತಿದ್ದು, ಉಳಿದ ವರ್ತಕರಿಗೆ ಬಹುತೇಕ ಉತ್ಪನ್ನ ಸಿಗದೆ ಪರದಾಡುವಂತಾಗಿದೆ ಎಂದು ಆರೋಪಿಸಿದರು.
25 ದಿನಗಳ ಅವಧಿಯಲ್ಲಿ ಸಾಕಷ್ಟು ಬಾರಿ ಏಜೆನ್ಸಿಗೆ ಖುದ್ದು ಬಂದು ಉತ್ಪಾದನಾ ವಸ್ತುಗಳನ್ನು ಕೇಳಿದರೂ ನೀಡುತ್ತಿಲ್ಲ. ತಮಗೆ ಬೇಕಾದ ವರ್ತಕರಿಗೆ ಗೂಡ್ಸ್ ವಾಹನ ತುಂಬಿಸಿ ಕಳುಹಿಸಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಮಂಜುನಾಥ ಚಿನ್ನಾಪುರ ದೂರಿದರು.
ಏಜೆನ್ಸಿ ಪ್ರೊಪರೇಟರ್ ಗುರುದತ್ತ ಮಾತನಾಡಿ, ಲಾಕ್ಡೌನ್ ಆದಾಗಿನಿಂದ ಉತ್ಪಾದನಾ ವಸ್ತುಗಳ ಸಾಗಣೆ ಸಮಸ್ಯೆ ಆಗುತ್ತಿದೆ. ತಾವು ವರ್ತಕರಿಗೆ ಯಾವುದೇ ತಾರತಮ್ಯ ಮಾಡಿಲ್ಲ. ಉತ್ಪಾದನೆ ಕೊರತೆಯಿಂದ ಸಮಸ್ಯೆ ಉದ್ಭವಿಸಿದೆ. ಶೀಘ್ರದಲ್ಲಯೇ ಸಮಸ್ಯೆ ಸರಿಪಡಿಸುತ್ತೇವೆ ಎಂದರು.