ಕರ್ನಾಟಕ

karnataka

ETV Bharat / state

ಹರ್ ಘರ್ ಜಲ್ ಯೋಜನೆ ಅನುಷ್ಠಾನಕ್ಕೆ ಸಹಕರಿಸಲು ತಾಪಂ ಇಒ ಮನವಿ

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಹರ್ ಘರ್ ಜಲ್ ಯೋಜನೆ ಅನುಷ್ಠಾನಕ್ಕೆ ಸಹಕರಿಸಲು ತಾಪಂ ಇಒ ಪಂಪಾಪತಿ ಹಿರೇಮಠ ಮನವಿ ಮಾಡಿದರು.

Pampapati Hiremath appeals
ಹರ್ ಘರ್ ಜಲ್ ಯೋಜನೆ ಅನುಷ್ಟಾನಕ್ಕೆ ಸಹಕರಿಸಲು ಪಂಪಾಪತಿ ಹಿರೇಮಠ ಮನವಿ

By

Published : Apr 25, 2020, 7:53 PM IST

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪ್ರತಿ ಗ್ರಾಮದಲ್ಲಿ ಹರ್ ಘರ್ ಜಲ್ ಯೋಜನೆ ಅನುಷ್ಠಾನಕ್ಕೆ ಸಹಕರಿಸಲು ಮುಂದಾಗುವಂತೆ ತಾಪಂ ಇಒ ಪಂಪಾಪತಿ ಹಿರೇಮಠ ಮನವಿ ಮಾಡಿದರು.

ಹರ್ ಘರ್ ಜಲ್ ಯೋಜನೆ ಅನುಷ್ಠಾನಕ್ಕೆ ಸಹಕರಿಸಲು ಪಂಪಾಪತಿ ಹಿರೇಮಠ ಮನವಿ

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಕರೆದಿದ್ದ ಪಿಡಿಒಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಪ್ರತಿಯೊಬ್ಬ ವ್ಯಕ್ತಿಗೆ ಗರಿಷ್ಠ 55 ಲೀಟರ್ ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಇಂಜಿನಿಯರ್ ಸಹಯೋಗದಲ್ಲಿ ಗ್ರಾಮದ ಜನಸಂಖ್ಯೆ, ಅಲ್ಲಿರುವ ನೀರಿನ ಸಾಂದ್ರತೆ ಆಧರಿಸಿ ಪ್ರತಿ ಮನೆ ಮನೆಗೆ ನೀರು ಪೂರೈಸಲು ಪೈಪ್ ಲೈನ್ ಅಳವಡಿಸಲು ಆಗಬಹುದಾದ ಅಂದಾಜು ವೆಚ್ಚದ ಕ್ರಿಯಾ ಯೋಜನೆ ಸಿದ್ಧ ಮಾಡಿಕೊಳ್ಳುವುದು ಕಡ್ಡಾಯ ಎಂದು ತಿಳಿಸಿದರು.

ABOUT THE AUTHOR

...view details