ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬೆಂಡೋಣಿ ಗ್ರಾಮದಲ್ಲಿ ಆಗ ತಾನೇ ಜನಿಸಿದ ಹೆಣ್ಣು ಮಗುವನ್ನು ಯಾರೋ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಅನಾಥ ಹೆಣ್ಣು ಶಿಶು ಪತ್ತೆ: ಆಸ್ಪತ್ರೆಗೆ ಸೇರಿಸಿದ ಕುರಿಗಾಹಿಗಳು - Orphan female baby
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಬೆಂಡೋಣಿ ಗ್ರಾಮದಲ್ಲಿ ಯಾರೋ ನವಜಾತ ಹೆಣ್ಣು ಶಿಶುವನ್ನು ಬಿಟ್ಟು ಹೋಗಿದ್ದು, ಮಗುವನ್ನು ನೋಡಿದ ಕುರಿಗಾಹಿಗಳು ಆಸ್ಪತ್ರೆಗೆ ಸೇರಿಸಿದ್ದಾರೆ.
ಈ ಮಗುವನ್ನು ನೋಡಿದ ಕುರಿಗಾಹಿಗಳು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಜಿಲ್ಲಾ ಮಕ್ಕಳ ಆರೋಗ್ಯ ರಕ್ಷಣಾ ಸಮಿತಿ ಅಧಿಕಾರಿ ಮಂಗಳ ಹೆಗಡೆ ನೇತೃತ್ವದ ತಂಡ ಆಸ್ಪತ್ರೆಗೆ ಭೇಟಿ ನೀಡಿ, ಮಗುವಿನ ಆರೋಗ್ಯ ಕುರಿತು ಡಾ. ಅನಿಲ್ಕುಮಾರ್ ಅವರ ಜೊತೆ ಮಾತುಕತೆ ನಡೆಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಅಧಿಕಾರಿ ಮಂಗಳ ಹೆಗಡೆ ಮಾತನಾಡಿ, ಮಗು ಆರೋಗ್ಯವಾಗಿದೆ. ಕಾನೂನು ಪ್ರಕಾರ ಮಗುವನ್ನು ಬಳ್ಳಾರಿ ರಕ್ಷಣ ಗೃಹಕ್ಕೆ ಸ್ಥಳಾಂತರ ಮಾಡಿ, ದತ್ತು ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತೆ. ಯಾರು ಬಾರದೆ ಹೋದಲ್ಲಿ ಸರ್ಕಾರವೇ ಮಗುವಿನ ಶಿಕ್ಷಣ ಸೇರಿದಂತೆ ಪಾಲನೆ ಪೋಷಣೆ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.