ಲಿಂಗಸುಗೂರು:ತಾಲೂಕಿನ ಪುರಸಭೆ ವ್ಯಾಪ್ತಿ ವಾರ್ಡ್ಗಳಿಗೆ ನೀರು ಪೂರೈಸುವ ನೀರು ಸಂಗ್ರಹಣಾ ಕೆರೆಗೆ ನಿಗದಿತ ಅವಧಿಯಲ್ಲಿ ನೀರು ತುಂಬಿಸಿಕೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಗರಂ ಆದರು.
ಮಂಗಳವಾರ ಸಂಜೆ ಕಾಳಾಪುರದ ನಾರಾಯಣಪುರ ಬಳಿ ನಿರ್ಮಿಸಿದ ನೀರು ಸಂಗ್ರಹಣಾ ಕೆರೆ ಭಾಗಶಃ ಬತ್ತಿ ಬರಿದಾಗಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ ಅವರು, ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳನ್ನು ಕರೆದು ತರಾಟೆಗೆ ತೆಗೆದುಕೊಂಡರು.
ನೀರು ಸಂಗ್ರಹಣಾ ಕೆರೆ ಭಾಗಶಃ ಖಾಲಿ; ಅಧಿಕಾರಿಗಳ ವಿರುದ್ಧ ಡಿಸಿಎಂ ಸವದಿ ಗರಂ ಜುಲೈ 1 ರೊಳಗೆ ಪರ್ಯಾಯ ವ್ಯವಸ್ಥೆ ಮೂಲಕ ಈ ಮುಂಚೆ ಪೂರೈಸುವಂತೆ ಶುದ್ಧ ಸಮರ್ಪಕ ಕುಡಿಯುವ ನೀರನ್ನು ನಾಗರಿಕರಿಗೆ ನೀಡಬೇಕು. ಮಳೆಗಾಲದ ನಂತರ ತುಂಬಿದ ಹೂಳು ತೆಗೆಯಲು ಮುಂದಾಗಬೇಕು. ಭವಿಷ್ಯದಲ್ಲಿ ನಿತ್ಯ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ರು.
ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಿ.ಎಸ್. ಹೊಲಗೇರಿ, ಮಾಜಿ ಶಾಸಕ ಮಾನಪ್ಪ ವಜ್ಜಲ್, ಸಹಾಯಕ ಆಯುಕ್ತ ರಾಜಶೇಖರ ಡಂಬಳ, ತಹಶೀಲ್ದಾರ್ ಚಾಮರಾಜ ಪಾಟೀಲ ಸೇರಿದಂತೆ ಪುರಸಭೆ ಸದಸ್ಯರು, ಮುಖಂಡರು ಹಾಜರಿದ್ದರು.