ರಾಯಚೂರು:ರಾಯಚೂರು ನಗರದಲ್ಲಿನ ಎಟಿಎಂಗಳಲ್ಲಿ ಹಣ ದೊರೆಯದೆ ಗ್ರಾಹಕರು ಪರದಾಡುತ್ತಿದ್ದಾರೆ.
ರಜೆ ಗೊತ್ತಿದ್ರೂ ಎಟಿಎಂಗಳಿಗೆ ಹಣ ತುಂಬದ ಬ್ಯಾಂಕುಗಳು, ಗ್ರಾಹಕರ ಪರದಾಟ - ಬ್ಯಾಂಕ್
ಸರ್ಕಾರಿ ರಜೆ ಇರುವಾಗ ಬ್ಯಾಂಕ್‌ನವರು ಮುಂಚಿತವಾಗಿ ಎಟಿಎಂಗಳಲ್ಲಿ ಹಣವನ್ನು ಹಾಕದೇ ಇರುವುದರಿಂದ ಗ್ರಾಹಕರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ವಿವಿಧ ಬ್ಯಾಂಕ್ಗಳಲ್ಲಿ ಗ್ರಾಹಕರು ಎಟಿಎಂ ಕಾರ್ಡ್ ಮುಖಾಂತರ ಹಣವನ್ನು ಡ್ರಾ ಮಾಡಲು ಹೋದ್ರೆ, ಎಟಿಎಂಗಳಲ್ಲಿ ನೋ ಕ್ಯಾಶ್ ಎಂಬ ಉತ್ತರ ಬರುತ್ತಿದೆ. ಕೆಲವು ಎಟಿಎಂ ಕೇಂದ್ರಗಳಲ್ಲಿ ದುಡ್ಡಿಲ್ಲ ಎನ್ನುವ ಕಾರಣಕ್ಕೆ ಬಾಗಿಲು ಸಹ ಹಾಕಲಾಗಿದೆ. ಇದರಿಂದ ಬ್ಯಾಂಕ್ನಲ್ಲಿ ಹಣ ಇರಿಸಿರುವ ಗ್ರಾಹಕರು ಹಣ ಪಡೆಯಲು ಸಂಕಷ್ಟ ಅನುಭವಿಸುತ್ತಿದ್ದಾರೆ.
ನಿನ್ನೆ ಎರಡನೇ ಶನಿವಾರ ಮತ್ತು ಇಂದು ಭಾನುವಾರ ಆಗಿರುವುದರಿಂದ ಬ್ಯಾಂಕ್ ಸಹ ಬಂದ್ ಆಗಿದೆ. ಬ್ಯಾಂಕ್ ಅಧಿಕಾರಿಗಳು ರಜೆ ಗಮನಿಸಿ ಮುಂಚಿತವಾಗಿ ಎಟಿಎಂಗಳಿಗೆ ಹಣ ಹಾಕದೇ ಇರುವುದರಿಂದ ಗ್ರಾಹಕರು ಪರದಾಡುವಂತಾಗಿದೆ. ಹೀಗಾಗಿ ಗ್ರಾಹಕರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.