ಕರ್ನಾಟಕ

karnataka

ETV Bharat / state

ರಾಯಚೂರಿಗೆ 'ಮಹಾ' ಕಂಟಕ: ಒಂದೇ ಕುಟುಂಬದ ಐವರಿಗೆ ವಕ್ಕರಿಸಿದ  ಮಹಾಮಾರಿ! - ಓಪೆಕ್ ಐಸೋಲೋಷನ್ ವಾರ್ಡ್

ಇಂದು ಒಂದೇ ಕುಟುಂಬದ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರನ್ನು ಒಪೆಕ್ ಐಸೋಲೋಷನ್ ವಾರ್ಡ್ ಗೆ ದಾಖಲಿಸಲಾಗಿದೆ.

new five corona cases in raichur
ರಾಯಚೂರು, ಒಂದೇ ಕುಟುಂಬದ ಐವರಿಗೆ ವಕ್ಕರಿಸಿದ ಕೊರೊನಾ ಮಹಾಮಾರಿ..!

By

Published : May 21, 2020, 8:25 PM IST

ರಾಯಚೂರು:ಜಿಲ್ಲೆಯಲ್ಲಿ ಇಂದು ಒಂದೇ ಕುಟುಂಬದ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 16ಕ್ಕೆ ಏರಿದಂತಾಗಿದೆ.

ಇವರಲ್ಲಿ ಇಬ್ಬರು ಬಾಲಕರು, ಓರ್ವ ಬಾಲಕಿ, ಓರ್ವ ಪುರುಷ ಮತ್ತು ಮಹಿಳೆ ಸೇರಿದಂತೆ ಐವರಿಗೆ ಸೋಂಕು ತಗುಲಿದೆ. ಪಿ-1582 ಮತ್ತು ಪಿ- 1581 ಬಾಲಕರು, ಪಿ-1583 ಬಾಲಕಿ, ಪಿ-1579 ಪುರುಷ (33 ವರ್ಷ) ಹಾಗೂ ಪಿ-1582 (32 ವರ್ಷ) ಮಹಿಳೆಗೆ ಸೋಂಕು ದೃಢಪಟ್ಟಿದೆ. ಈ ಕುಟುಂಬ ಕೆಲಸ ಅರಿಸಿಕೊಂಡು ಮಹಾರಾಷ್ಟ್ರದ ಮುಂಬೈಗೆ ವಲಸೆ ಹೋಗಿತ್ತು.

ಕೊರೊನಾ ಲಾಕ್​​​​​​​​​ಡೌನ್ ನಿಂದಾಗಿ ಇತ್ತೀಚೆಗೆ ಜಿಲ್ಲೆಗೆ ವಾಪಸ್ ಆಗಿದ್ದರು. ವಾಪಸ್ ಆದ ಇವರನ್ನ ಸಾಂಸ್ಥಿಕ ಕ್ವಾರಂಟೈನ್​ ಕೇಂದ್ರದಲ್ಲಿರಿಸಿ, ಗಂಟಲು ದ್ರವವನ್ನ ಪ್ರಯೋಗಾಲಯಕ್ಕೆ ಪರೀಕ್ಷೆಗೆ ರವಾನಿಸಲಾಗಿತ್ತು. ಇಂದು ಸಂಜೆ ಬಂದ ಕೊರೊನಾ ಬುಲೆಟಿನ್ ನಲ್ಲಿ ಐವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 16ಕ್ಕೆ ಏರಿದಂತಾಗಿದೆ.

ದಿನೇ ದಿನೆ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯಿಂದ ಜಿಲ್ಲೆಯ ಜನತೆ ಆತಂಕಗೊಂಡಿದ್ದಾರೆ. ಸದ್ಯ ಸೋಂಕು ಕಂಡ ಬಂದ ಐವರನ್ನ ಒಪೆಕ್ ಐಸೋಲೋಷನ್ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ, ದ್ವಿತೀಯ ಸಂಪರ್ಕದ ಮಾಹಿತಿಯನ್ನ ಜಿಲ್ಲಾಡಳಿತ ಪತ್ತೆ ಹಚ್ಚಲು ಮುಂದಾಗಿದೆ.

ABOUT THE AUTHOR

...view details