ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ಸಿಡಿಲು ಬಡಿದು ಗುಡಿಸಲಿಗೆ ಬೆಂಕಿ: ವ್ಯಕ್ತಿ ಸಜೀವ ದಹನ - ವ್ಯಕ್ತಿ ಸಜೀವ ದಹನ

ಸಿಡಿಲು ಬಡಿದು ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ವ್ಯಕ್ತಿಯೊಬ್ಬರು ಸಜೀವವಾಗಿ ದಹನವಾಗಿರುವ ದಾರುಣ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

burnt hut
burnt hut

By

Published : Aug 22, 2020, 11:58 AM IST

Updated : Aug 22, 2020, 2:59 PM IST

ರಾಯಚೂರು:ಗುಡಿಸಲಿಗೆ ಸಿಡಿಲು ಬಡಿದು ಬೆಂಕಿ ಉಂಟಾದ ಪರಿಣಾಮ ವ್ಯಕ್ತಿಯೊಬ್ಬರು ಸಜೀವ ದಹನವಾಗಿರುವ ದಾರುಣ ಘಟನೆ ದೇವದುರ್ಗ ತಾಲೂಕಿನ ಅರಕೇರಾ‌ ಗ್ರಾಮದ ಹೊರವಲಯದಲ್ಲಿ ಸಂಭವಿಸಿದೆ.

ಗುಡಿಸಲಿಗೆ ಬೆಂಕಿ (ಕಳೆದ ರಾತ್ರಿಯ ವಿಡಿಯೋ)

ಸಜೀವ ದಹನವಾಗಿರುವ ವ್ಯಕ್ತಿ ನಾಗಪ್ಪ ತಾತ (40) ಎಂದು ಗುರುತಿಸಲಾಗಿದೆ. ಇದರ ಜತೆಗೆ ಗುಡಿಸಲಿನಲ್ಲಿದ್ದ ಮೇಕೆ ಕೂಡಾ ಬೆಂಕಿಗೆ ಆಹುತಿಯಾಗಿದೆ.

ಗುಡಿಸಲಿಗೆ ಬೆಂಕಿ, ವ್ಯಕ್ತಿ ಸಜೀವ ದಹನ

ಅರಕೇರಾ ಗ್ರಾಮದಿಂದ ಶಿವಂಗಿಗೆ ಬರುವ ರಸ್ತೆ ಬದಿಯ ಹೊಲದಲ್ಲಿರುವ ಗುಡಿಸಲಲ್ಲಿ ನಾಗಪ್ಪ ತಾತ ಎಂಬವರು ವಾಸಿಸುತ್ತಿದ್ದರು. ಕಳೆದ ರಾತ್ರಿ ಸಿಡಿಲು ಸಹಿತ ಮಳೆ ಶುರುವಾಗಿತ್ತು. ಈ ವೇಳೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿದೆ.

ಬೆಂಕಿಗೆ ಆಹುತಿಯಾದ ಗುಡಿಸಲು

ಬೆಂಕಿ ಕೆನ್ನಾಲಿಗೆಗೆ ಬೈಕ್, ನಿತ್ಯ ಬಳಕೆ ವಸ್ತುಗಳೂ ಸಹ ಆಹುತಿಯಾಗಿವೆ.

ಬೆಂಕಿಗೆ ಆಹುತಿಯಾದ ಗುಡಿಸಲು

ಸ್ಥಳಕ್ಕೆ ದೇವದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪತಿಯನ್ನು ಕಳೆದುಕೊಂಡ ಪತ್ನಿ, ಮಕ್ಕಳು ರೋಧಿಸುತ್ತಿದ್ದರು.

Last Updated : Aug 22, 2020, 2:59 PM IST

ABOUT THE AUTHOR

...view details