ರಾಯಚೂರು :ಕರ್ನಾಟಕದಲ್ಲಿಮದ್ಯ ಮಾರಾಟ ಸಂಪೂರ್ಣ ನಿಷೇಧಿಸಬೇಕೆಂದು ಆಗ್ರಹಿಸಿ ರಾಜ್ಯ ಮದ್ಯ ನಿಷೇಧ ಆಂದೋಲನ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿ ಸಂಪೂರ್ಣ ಸಾರಾಯಿ ನಿಷೇಧಿಸಿ.. ಮದ್ಯ ನಿಷೇಧ ಆಂದೋಲನ ಸಂಘಟನೆ
ರಾಜ್ಯದಲ್ಲಿ ಮದ್ಯ ಮಾರಾಟವನ್ನ ಸಂಪೂರ್ಣ ಬ್ಯಾನ್ ಮಾಡಲು ಇದು ಒಳ್ಳೆಯ ಸಂದರ್ಭ. ಹೀಗಾಗಿ ಸರ್ಕಾರ ಮದ್ಯಪಾನ ನಿಷೇಧಿಸುವ ಮೂಲಕ ಭಾರತ ಸಂವಿಧಾನದ ಅನುಚ್ಛೇದ-47ರಲ್ಲಿ ರಾಜ್ಯಗಳಿಗೆ ನೀಡಲಾದ ನಿರ್ದೇಶನದಂತೆ ಮದ್ಯ ಮುಕ್ತ ಕರ್ನಾಟಕ ಸರ್ಕಾರ ಶಾಸನ ಜಾರಿಗೊಳಿಸಬೇಕು ಎಂದರು.
ಲಾಕ್‌ಡೌನ್ ಹಿನ್ನೆಲೆ ಮದ್ಯಪಾನ ಮಾರಾಟ ಸಂಪೂರ್ಣ ನಿಷೇಧ ಮಾಡಲಾಗಿತ್ತು. ಇದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗಿದ್ದು, ಮಹಿಳೆಯರು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ರಾಜ್ಯದಲ್ಲಿ ಮದ್ಯ ಮಾರಾಟವನ್ನ ಸಂಪೂರ್ಣ ಬ್ಯಾನ್ ಮಾಡಲು ಇದು ಒಳ್ಳೆಯ ಸಂದರ್ಭ. ಹೀಗಾಗಿ ಸರ್ಕಾರ ಮದ್ಯಪಾನ ನಿಷೇಧಿಸುವ ಮೂಲಕ ಭಾರತ ಸಂವಿಧಾನದ ಅನುಚ್ಛೇದ-47ರಲ್ಲಿ ರಾಜ್ಯಗಳಿಗೆ ನೀಡಲಾದ ನಿರ್ದೇಶನದಂತೆ ಮದ್ಯ ಮುಕ್ತ ಕರ್ನಾಟಕ ಸರ್ಕಾರ ಶಾಸನ ಜಾರಿಗೊಳಿಸಬೇಕು ಎಂದರು.
ಪ್ರತಿಯೊಂದು ತಾಲೂಕು ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮದ್ಯ ವರ್ಜನೆ ಕೇಂದ್ರಗಳನ್ನ ತೆರೆಯಬೇಕು. ಮದ್ಯ ವ್ಯಸನಿಗಳನ್ನ ಗುರುತಿಸಿ ಮದ್ಯ ವರ್ಜನ ಕೇಂದ್ರಗಳಿಗೆ ಸೇರಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.