ಕರ್ನಾಟಕ

karnataka

ETV Bharat / state

ಬಡವರಿಗೆ 100 ಕ್ವಿಂಟಾಲ್​ ಅಕ್ಕಿ ವಿತರಣೆ ಮಾಡಿದ ಲಿಂಗಸುಗೂರು ಶಾಸಕ ಹೂಲಗೇರಿ

ಲಿಂಗಸುಗೂರು ಶಾಸಕ ಹೂಲಗೇರಿ ಕಡು ಬಡವರಿಗೆ ಕುಟುಂಬಕ್ಕೆ 15 ಕೆಜಿಯಂತೆ 100 ಕ್ವಿಂಟಾಲ್​​ ಅಕ್ಕಿ ವಿತರಣೆ ಮಾಡಿದರು.

Lingasaguru legislator Hillageri distributed rice
ಅಕ್ಕಿ ವಿತರಣೆ

By

Published : Apr 9, 2020, 9:04 AM IST

ರಾಯಚೂರು: ಕೊರೊನಾ ಲಾಕ್​ಡೌನ್ ಹಿನ್ನೆಲೆ ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿ ಕಡು ಬಡವರಿಗೆ ಅಕ್ಕಿ ವಿತರಿಸಿದರು.

ಜಿಲ್ಲೆಯ ಹಟ್ಟಿ ಸುತ್ತಮುತ್ತಲ ಬಡವರನ್ನು ಗುರುತಿಸಿ 100 ಕ್ವಿಂಟಾಲ್ ಅಕ್ಕಿಯನ್ನು ಕುಟುಂಬಕ್ಕೆ 15 ಕೆಜಿ ಯಂತೆ ವಿತರಿಸಿದರು. ಸರ್ಕಾರ ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ಸಹಾಯ ಒದಗಿಸುವ ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಲಿಂಗಸುಗೂರು ಶಾಸಕ ಡಿ.ಎಸ್. ಹೂಲಗೇರಿ, ತಾಲೂಕಿನಾದ್ಯಂತ 14 ಸಾವಿರಕ್ಕೂ ಹೆಚ್ಚು ಜನ ಗುಳೆ ಹೋದವರು ವಾಪಸ್​ ಬಂದಿದ್ದಾರೆ. ಅಂಥವರು ಮತ್ತು ಉಳಿದ ಬಡವರನ್ನು ಗುರುತಿಸಿ 250 ಕ್ವಿಂಟಾಲ್ ಅಕ್ಕಿ ವಿತರಣೆ ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್ಲ, ಮುಖಂಡರಾದ ಶಂಕರಗೌಡ ಬಳಗಾನೂರ, ಹನುಮಂತರೆಡ್ಡಿ, ಶಿವಣ್ಣ ಕೋಠ ಉಪಸ್ಥಿತರಿದ್ದರು.

ABOUT THE AUTHOR

...view details